Connect with us

KARNATAKA

ಕಚ್ಚಿದ ನಾಗರಹಾವನ್ನು ಕೈಯಲ್ಲಿ ಹಿಡಿದು ಆಸ್ಪತ್ರೆಗೆ ಬಂದ ಯುವಕ

ಹುಬ್ಬಳ್ಳಿ : ತನಗೆ ಕಚ್ಚಿದ್ದ ನಾಗರಹಾವನ್ನು ಕೈಯಲ್ಲಿ ಹಿಡಿದುಕೊಂಡು ಸೀದಾ ಆಸ್ಪತ್ರೆಗೆ ಆಗಮಿಸಿ ಯುವಕನೊಬ್ಬ ಅಚ್ಚರಿಸಿ ಮೂಡಿಸಿರುವ ಘಟನೆ ಕಂಪ್ಲಿಯಲ್ಲಿ ನಡೆದಿದೆ.


ಉಪ್ಪಾರಹಳ್ಳಿ ಗ್ರಾಮದ ವಾಲ್ಮೀಕಿ ಕಾಡಪ್ಪ(25) ಅವರಿಗೆ ನಾಗರಹಾವೊಂದು ಕಚ್ಚಿದೆ. ಆದರೆ ಯುವಕ ಗಾಬರಿಯಾಗದೇ ಕಚ್ಚಿದ ಹಾವನ್ನು ಕೈಯಲ್ಲೆ ಹಿಡಿದುಕೊಂಡು ಬೆರೆಯೊಬ್ಬರ ಸಹಾಯದಿಂದ ಬೈಕ್ ಮೂಲಕ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರಕ್ಕೆ ತೆರಳಿ ಪ್ರಥಮ ಚಿಕಿತ್ಸೆ ಪಡೆದಿದ್ದಾನೆ. ಬಳಿಕ ಹೆಚ್ಚಿನ ಚಿಕಿತ್ಸೆಗೆ ವಿಮ್ಸ್‌ಗೆ ದಾಖಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ.