Connect with us

  LATEST NEWS

  ಮಂಗಳೂರು ಮುಗ್ರೋಡಿಯಲ್ಲಿ ಕಾಲು ಜಾರಿ ಬಾವಿಗೆ ಬಿದ್ದು ವ್ಯಕ್ತಿ ಮೃತ್ಯು..!

  ವ್ಯಕ್ತಿ ಒರ್ವ ಕಾಲು ಜಾರಿ ಬಾವಿಗೆ ಬಿದ್ದ ಘಟನೆ ಮಂಗಳೂರು ನಗರದ ಮುಗ್ರೋಡಿಯಲ್ಲಿ ನಡೆದಿದೆ.

  ಮಂಗಳೂರು :ವ್ಯಕ್ತಿ ಒರ್ವ ಕಾಲು ಜಾರಿ ಬಾವಿಗೆ ಬಿದ್ದ ಘಟನೆ ಮಂಗಳೂರು ನಗರದ ಮುಗ್ರೋಡಿಯಲ್ಲಿ ನಡೆದಿದೆ.

  ಮೃತನನ್ನು ಚಂದ್ರಕಾಂತ್ (41) ಎಂದು ಗುರುತ್ತಿಸಲಾಗಿದೆ,ಸ್ಥಳಿಯ ಬಾಡಿಗೆ ಮನೆಯಲ್ಲಿ ಪೋಷಕರೊಂದಿಗೆ ವಾಸವಾಗಿದ್ದ ಚಂದ್ರಕಾಂತ್ ಮೇಸ್ತ್ರೀ ಕೆಲಸದೊಂದಿಗೆ ಇತರ ಸಣ್ಣಪುಟ್ಟ ಕೆಲಸಗಳನ್ನು ಮಾಡುತ್ತಿದ್ದನು.

  ನರ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಪಡೆದು ನಿನ್ನೆಯಷ್ಟೇ ಮನೆಗೆ ಬಂದಿದ್ದರು ಎನ್ನಲಾಗಿದೆ,

  ನಿನ್ನೆ ಸಂಜೆ ಹೊತ್ತಿಗೆ ಚಿಕ್ಕಮ್ಮನ ಮನೆಗೆ ಹೋಗಿ ಬರುತ್ತೇನೆಂದು ಹೋಗಿದ್ದ್ದ ಚಂದ್ರಕಾಂತ್ ತಡ ರಾತ್ರಿಯಾದರೂ ಬಾರದ ಕಾರಣ ಸ್ಥಳಿಯರ ಸಹಕಾರದೊಂದಿಗೆ ಶೋಧಕಾರ್ಯ ನಡೆಸಿದ್ದರು.

  ಬಳಿಕ ಆವರಣ ಇಲ್ಲದ ಬಾವಿ ಸಮೀಪ ಇಂದು ಅವರ ಚಪ್ಪಲ್ ಕಾಣ ಸಿಕ್ಕಿದ್ದರಿಂದ ಬಾವಿಯಲ್ಲಿ ಹುಡುವಾಗ ಅವರು ಶವವಾಗಿ ಪತ್ತೆಯಾಗಿದ್ದು ಮಂಗಳೂರು ನಗರ ಠಾಣಾ ಸಬ್ ಇನ್ಸ್‌ಪೆಕ್ಟರ್ ಅನಿತಾ ನಿಕಂ ಮತ್ತು ಅಗ್ನಿಶಾಮಕದಳದ ನೆರವಿನೊಂದಿಗೆ ಶವವನ್ನು ಮೇಲಕ್ಕೆತ್ತಿ ಮಹಜರ್ ಮಾಡಿದ್ದಾರೆ,

  ಕಂಕನಾಡಿ ನಗರ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

  Share Information
  Advertisement
  Click to comment

  You must be logged in to post a comment Login

  Leave a Reply