LATEST NEWS
ಕಂಟೈನರ್ ಜಾರಿ ಬಿದ್ದು ಸ್ಥಳದಲ್ಲೇ ಮೃತಪಟ್ಟ ಕಾರ್ಮಿಕ

ಕಂಟೈನರ್ ಜಾರಿ ಬಿದ್ದು ಸ್ಥಳದಲ್ಲೇ ಮೃತಪಟ್ಟ ಕಾರ್ಮಿಕ
ಮಂಗಳೂರು ನವೆಂಬರ್ 7: ಮಂಗಳೂರಿನ ಪಣಂಬೂರಿನಲ್ಲಿರುವ ಎನ್ಎಂಪಿಟಿಯಲ್ಲಿ ಕಂಟೈನರ್ ಕಾರ್ಮಿಕನ ಮೇಲೆ ಜಾರಿ ಬಿದ್ದ ಪರಿಣಾಮ ಕಾರ್ಮಿಕ ಸ್ಥಳದಲ್ಲಿ ಸಾವನ್ನಪ್ಪಿದ ಘಟನೆ ನಡೆದಿದೆ. ಮೃತರನ್ನು ವಾಮಂಜೂರಿನ ನಿವಾಸಿ ವಿನೋದ್ ಪೂಜಾರಿ ಎಂದು ಗುರುತಿಸಲಾಗಿದೆ. ಹಡಗಿಗೆ ರಫ್ತು ಮಾಡುತ್ತಿದ್ದ ಕಂಟೈನರ್ ಲಾರಿಯಿಂದ ಜಾರಿ ಕ್ಯಾಬಿನ್ ಮೇಲೆ ಬಿದ್ದು, ಕ್ಯಾಬಿನ್ನಲ್ಲಿದ್ದ ವಿನೋದ್ ಸ್ಥಳದಲ್ಲಿ ಸಾವನ್ನಪ್ಪಿದ್ದಾರೆ.
ಲಾರಿಯಲ್ಲಿ ಸೇಪ್ಟಿ ಲಾಕರ್ ಹಾಕದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ. ಘಟನೆ ಕುರಿತಂತೆ ಪಣಂಬೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
