FILM
ಮಲೆಯಾಳಂ ಸೂಪರ್ ಸ್ಟಾರ್ ಮಮ್ಮುಟ್ಟಿ ತಾಯಿ ನಿಧನ…!!

ಕೊಚ್ಚಿ ಎಪ್ರಿಲ್ 21: ಮಲಯಾಳಂ ಚಿತ್ರರಂಗದ ಸೂಪರ್ ಸ್ಟಾರ್ ಮಮ್ಮುಟ್ಟಿ ಅವರ ತಾಯಿ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಅವರಿಗೆ 93 ವರ್ಷ ವಯಸ್ಸಾಗಿತ್ತು.
ಖ್ಯಾತ ನಟ ಮಮ್ಮುಟ್ಟಿ ಅವರ ತಾಯಿ ಫಾತಿಮಾ ಇಸ್ಮಾಯಿಲ್ (93) ಅವರು ಕಳೆದ ಕೆಲ ಸಮಯದಿಂದ ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. ಫಾತಿಮಾ ಇಸ್ಮಾಯಿಲ್ ಅವರಿಗೆ ಮಮ್ಮುಟ್ಟಿ,ಇಬ್ರಾಹಿಂ ಕುಟ್ಟಿ , ಶಫೀನಾ, ಅಮೀನಾ, ಸೌದಾ ಮತ್ತು ಜಕರಿಯಾ ಎನ್ನುವ ಮಕ್ಕಳಿದ್ದಾರೆ. ಮಮ್ಮುಟ್ಟಿ ಹಿರಿಯ ಮಗನಾಗಿದ್ದಾರೆ. ಮಮ್ಮುಟ್ಟಿ ಅವರ ತಾಯಿಯ ನಿಧನಕ್ಕೆ ಕಾಂಗ್ರೆಸ್ ನಾಯಕ ಶಶಿ ತರೂರ್ ಸೇರಿದಂತೆ ಹಲವಾರು ಗಣ್ಯರು ಸಂತಾಪ ಸೂಚಿಸಿದ್ದಾರೆ.
