ಉಡುಪಿ ಮಾರ್ಚ್ 28: ಭಾರೀ ಗಾಳಿ ಮಳೆ ಮುನ್ಸೂಚನೆ ಹಿನ್ನಲೆ ಮಲ್ಪೆ ಬೀಚ್‌ನಲ್ಲಿ ಅಳವಡಿಸಲಾಗಿದ್ದ ತೇಲುವ ಸೇತುವೆಯನ್ನು ತಾತ್ಕಾಲಿಕವಾಗಿ ತೆರವುಗೊಳಿಸಲಾಗಿದೆ ಎಂದು ಮಂತ್ರ ಟೂರಿಸಂ ತಿಳಿಸಿದೆ.


ಸಮುದ್ರದ ನೀರಿನಲ್ಲಿ ತೇಲುವಾಗ ಪ್ಲಾಸ್ಟಿಕ್‌ ಬಾಕ್ಸ್‌ಗಳ ಕೆಳಗಿನ ಭಾಗದಲ್ಲಿ ಚಿಪ್ಪುಗಳು ಜಮೆಯಾಗಿರುತ್ತವೆ. ಅವುಗಳನ್ನು ತೆಗೆಯಲು ಸೇತುವೆಯನ್ನು ತೆರವು ಮಾಡಲಾಗಿದೆ. ಆದರೆ ಕೆಲವರು ಮತ್ತೆ ತೇಲುವ ಸೇತುವೆ ಮುರಿದುಹೋಗಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ ಮಾಡುತ್ತಿದ್ದಾರೆ. ಇದು ಸತ್ಯಕ್ಕೆ ದೂರವಾಗಿದೆ ಎಂದು ಸಂಸ್ಥೆ ತಿಳಿಸಿದೆ.

Share Information