LATEST NEWS
ಮಲ್ಪೆ ಬೀಚ್ ಗೆ ಬಾಂಬ್ ಹಾಕುವುದಾಗಿ ಬೆದರಿಕೆ ವಿಡಿಯೋ ಮಾಡಿದ್ದ ಆರೋಪಿ ಆರೆಸ್ಟ್

ಮಲ್ಪೆ ಬೀಚ್ ಗೆ ಬಾಂಬ್ ಹಾಕುವುದಾಗಿ ಬೆದರಿಕೆ ವಿಡಿಯೋ ಮಾಡಿದ್ದ ಆರೋಪಿ ಆರೆಸ್ಟ್
ಉಡುಪಿ ಮಾರ್ಚ್ 2 : ಉಡುಪಿ ಮಲ್ಪೆ ಬೀಚ್ ಗೆ ಬಾಂಬ್ ಹಾಕುವುದಾಗಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿ ಆತಂಕ ಸೃಷ್ಠಿಸಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ಮಲ್ಪೆ ಸಮೀಪದ ತೊಟ್ಟ ನಿವಾಸಿ ಸೃಜನ್ ಎಂದು ಗುರುತಿಸಲಾಗಿದ್ದು, ಬಂಧಿತನಿಂದ ಕೃತ್ಯಕ್ಕೆ ಬಳಸಲಾಗಿದ್ದ ಮೊಬೈಲ್ ಪೋನ್ ನ್ನು ವಶಕ್ಕೆ ಪಡೆಯಲಾಗಿದೆ.

ವೈರಲ್ ಆಗಿರುವ ಒಂದೂವರೆ ನಿಮಿಷದ ನಿಮಿಷದ ವಿಡಿಯೋದಲ್ಲಿ ಯುವಕ ಅವಾಚ್ಯ ರೀತಿಯಲ್ಲಿ ಮಾತನಾಡುತ್ತಾನೆ. ಪಾಕಿಸ್ತಾನ್ ಜಿಂದಾಬಾದ್ ಹೇಳುತ್ತಾನೆ. ಆಮೇಲೆ ನಗ್ತಾನೆ. ಹೀಗಾಗಿ ಇದು ಕಿಡಿಗೇಡಿಯ ಕೃತ್ಯ ಅನ್ನೋದು ಸ್ಪಷ್ಟವಾಗುತ್ತದೆ. ಹಿಂದಿಯಲ್ಲಿ ಮಾತನಾಡಿರುವ ಕಿಡಿಗೇಡಿ, ಉತ್ತರ ಭಾರತೀಯನ ಉಚ್ಚಾರದಂತೆ ಕೇಳಿಸುತ್ತಿದೆ.
ಶುಕ್ರವಾರ ಮಲ್ಪೆ ನಿವಾಸಿಯೊಬ್ಬರು ಬಾಂಬ್ ಬೆದರಿಕೆ ವಿಡಿಯೋವನ್ನು ಮಲ್ಪೆ ಪೊಲೀಸರಿಗೆ ನೀಡಿದ್ದರು. ವಿಡಿಯೋ ಪರಿಶೀಲಿಸಿ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡ ಪೊಲೀಸರು ಮಲ್ಪೆ ಬೀಚ್ ಪರಿಸರದಲ್ಲಿರುವ ಅಂಗಡಿಗಳನ್ನು ತಪಾಸಣೆಗೊಳಪಡಿಸಿದರು.
ನೇಪಾಳ ಮೂಲದ ಯುವಕ ನೀಡಿದ ಮಾಹಿತಿ ಆಧರಿಸಿ ತೊಟ್ಟಂನಲ್ಲಿ ಆರೋಪಿ ಸೃಜನ್‌ನನ್ನು ಬಂಧಿಸಲಾಯಿತು. ವಿಚಾರಣೆ ಸಂದರ್ಭ ತಾನೇ ವಿಡಿಯೋ ಮಾಡಿರುವುದಾಗಿ ಸೃಜನ್ ಒಪ್ಪಿಕೊಂಡಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.
ಆರೋಪಿ ಕುರಿ ಕಾಯುವ ಕೆಲಸ ಮಾಡುತ್ತಿದ್ದು, ತಂದೆ ಪ್ಲಾಸ್ಟಿಕ್ ಅಂಗಡಿ ನಡೆಸುತ್ತಾರೆ. ಯಾವ ಉದ್ದೇಶದಿಂದ ವಿಡಿಯೋ ಮಾಡಲಾಗಿದೆ ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.