Connect with us

    KARNATAKA

    ಕಾಸರಗೋಡಿನಲ್ಲಿ ಎರಡು ಮಳಿಗೆಗಳು ಅಗ್ನಿಗಾಹುತಿ, 15 ಲಕ್ಷ ರೂ. ನಷ್ಟ..!

    ಕಾಸರಗೋಡು: ಎರಡು ಮಳಿಗೆಗಳು ಅಗ್ನಿಗಾಹುತಿಯಾಗಿ ಲಕ್ಷಾಂತರ ರೂಪಾಯಿಗಳ ನಷ್ಟ ಸಂಭವಸಿದ  ಘಟನೆ ಗುರುವಾರ ಬೆಳಿಗ್ಗೆ ಕಾಸರಗೋಡಿನ ಹಳೆ ಬಸ್ಸು ನಿಲ್ದಾಣ ಸಮೀಪ ಸಂಭವಿಸಿದೆ.

    ನಗರದ ಹಳೆ ಬಸ್ಸು ನಿಲ್ದಾಣ ಸಮೀಪದ ಸರಕು ಸಾಮಾಗ್ರಿ ಹಾಗೂ ಮೊಬೈಲ್ ಹಾಗೂ ವಾಚ್ ವರ್ಕ್ಸ್ ಮಳಿಗೆಯಲ್ಲಿ ಈ  ಅನಾಹುತ ನಡೆದಿದೆ. ಘಟನೆಗೆ ಶಾರ್ಟ್ ಸರ್ಕ್ಯೂಟ್ ಕಾರಣ ಎಂದು ಶಂಕಿಸಲಾಗಿದೆ. ಮೊಬೈಲ್ ಮಳಿಗೆಯಲ್ಲಿ ಮೂರು ಲಕ್ಷ ರೂ. ಹಾಗೂ ಸರಕು ಸಾಮಾಗ್ರಿ ಮಳಿಗೆಯಲ್ಲಿ ಸುಮಾರು 12 ಲಕ್ಷ ರೂ.ನಷ್ಟವುಂಟಾಗಿರಬಹುದು ಎಂದು ಅಂದಾಜಿಸಲಾಗಿದೆ. ಸ್ಥಳಕ್ಕೆ ಆಗಮಿಸಿದ ಅಗ್ನಿ ಶಾಮಕ ದಳದ ಸಿಬ್ಬಂದಿ ಬೆಂಕಿಯನ್ನು ನಂದಿಸಿ ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply