Connect with us

  LATEST NEWS

  ಕೇರಳ: ಪಟಾಕಿ ಇಳಿಸುವಾಗ ಸ್ಫೋಟ, 1 ಬಲಿ, ಹಲವರು ಗಾಯ, ಛಿದ್ರಗೊಡ ವಾಹನ..!

  ತಿರುವನಂತಪುರ :  ವಾಹನದಿಂದ ಪಟಾಕಿ ಸರಕು ಇಳಿಸುವಾಗ ಸಂಭವಿಸಿದ ಸ್ಫೋಟದಲ್ಲಿ ಓರ್ವ ಸಾವನ್ನಪ್ಪಿ, ಹಲವರು ಜನ ಗಂಭೀರ ಗಾಯಗೊಂಡಿರುವ ಘಟನೆ ಕೇರಳದಲ್ಲಿ ನಡೆದಿದೆ.

   

  ಚೂರಕ್ಕಾಡ್​ನಲ್ಲಿರುವ ಮನೆಯೊಂದರ ಬಳಿ ಈ ಭೀಕರ ಸ್ಫೋಟ ಸಂಭವಿಸಿದೆ, ಮನೆಯೊಂದರಲ್ಲೇ ಕಾರ್ಯನಿರ್ವಹಿಸುತ್ತಿದ್ದ ಪಟಾಕಿ ಸಂಗ್ರಹಗಾರದ ಬಳಿ ಈ ಸ್ಫೋಟ ನಡೆದಿದೆ. ಘಟನೆಯಲ್ಲಿ ಸುಮಾರು 16 ಮಂದಿ ಗಾಯಗೊಂಡಿದ್ದಾರೆ. ಸಮೀಪದ ಮನೆಗಳು ಹಾಗೂ ಇತರೆ ಕಟ್ಟಡಗಳಿಗೆ ಭಾರಿ ಪ್ರಮಾಣದಲ್ಲಿ ಹಾನಿಯುಂಟಾಗಿದೆ. ಮೃತರನ್ನು ಉಳೂರು ಮೂಲದ ಅಶೋಕನ್ ಅವರ ಪುತ್ರ ವಿಷ್ಣು ಎಂದು ಗುರುತಿಸಲಾಗಿದೆ.

  ಸ್ಫೋಟದಲ್ಲಿ ಗಾಯಗೊಂಡ 12 ಮಂದಿ ವೈದ್ಯಕೀಯ ಆರೈಕೆಯಲ್ಲಿದ್ದಾರೆ. ಇವರಲ್ಲಿ ಚಿಂತಾಜನಕ ಸ್ಥಿತಿಯಲ್ಲಿದ್ದ ಓರ್ವನನ್ನು ಕೊಚ್ಚಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೂವರನ್ನು ಕಲಮೆಸ್ಸೆರಿ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.ಈ ನಡುವೆ ಪೊಲೀಸರ ಅನುಮತಿ ಪಡೆಯದೇ ಪಟಾಕಿಗಳನ್ನು ಜನವಸತಿ ಪ್ರದೇಶಕ್ಕೆ ಕೊಂಡೊಯ್ಯಲಾಗಿದೆ ಎಂದು ಹೇಳಲಾಗಿದೆ. ವಾಹನದಿಂದ ಇಳಿಸುವಾಗ ಪಟಾಕಿ ಸಿಡಿದಿದೆ ಎಂದು ಹೇಳಲಾಗಿದೆ. ಪಟಾಕಿ ಕೊಂಡೊಯ್ಯುವ ವಾಹನವೂ ಸ್ಪೋಟಕ್ಕೆ ಛಿದ್ರಗೊಂಡಿದೆ . ಅಕ್ಕಪಕ್ಕದಲ್ಲಿದ್ದ ವೃದ್ಧರು, ಮಕ್ಕಳು ಗಾಯಗೊಂಡಿದ್ದಾರೆ. ಸ್ಫೋಟದಲ್ಲಿ 30 ಮನೆಗಳಿಗೆ ಹಾನಿಯಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

  Share Information
  Advertisement
  Click to comment

  You must be logged in to post a comment Login

  Leave a Reply