National
ಪ್ಯಾರಿಸ್ ಲಕ್ಷುರಿ ಬ್ರ್ಯಾಂಡ್ ಮಾಝ್ ನಿಂದ ಭಾರತದಲ್ಲಿ ಮೊದಲ ಮಳಿಗೆ – ರಿಲಯನ್ಸ್ ಬ್ರ್ಯಾಂಡ್ಸ್ ಸಹಯೋಗ ಘೋಷಣೆ

ಮುಂಬೈ, ಫೆಬ್ರವರಿ 4: ರಿಲಯನ್ಸ್ ಬ್ರ್ಯಾಂಡ್ಸ್ ಲಿಮಿಟೆಡ್ (ಆರ್ ಬಿಎಲ್) ಸಹಯೋಗದೊಂದಿಗೆ ಭಾರತದಲ್ಲಿ ತನ್ನ ಮೊದಲ ಮಳಿಗೆಯನ್ನು ಆರಂಭಿಸುತ್ತಿದೆ ಪ್ಯಾರಿಸ್ ನ ಹೆಸರಾಂತ ಬ್ರ್ಯಾಂಡ್ ಆದ ಮಾಝ್ (Maje). ಭಾರತದ ಮಾರುಕಟ್ಟೆಯಲ್ಲಿ ಇದು ಸಂಚಲನ ಸೃಷ್ಟಿಸುವಂಥ ಸಂಗತಿಯಾಗಿದ್ದು, ಮುಂಬೈನಲ್ಲಿ ಇರುವಂಥ ಜಿಯೋ ವರ್ಲ್ಡ್ ಡ್ರೈವ್ ನಲ್ಲಿ ಮಾಝ್ ತನ್ನ ಮಳಿಗೆ ಆರಂಭಿಸಲಿದೆ. ಇನ್ನು ಮುಂದೆ ಭಾರತೀಯ ಮಹಿಳೆಯರಿಗೆ ವಿಲಾಸಿ ಹಾಗೂ ದಿಟ್ಟ ಕ್ರಿಯೇಟಿವ್ ಉತ್ಪನ್ನಗಳು ದೊರೆಯಲಿವೆ. 1998ನೇ ಇಸವಿಯಲ್ಲಿ ಜುಡಿತ್ ಮಿಲ್ ಗ್ರೋಮ್ ಅವರು ಸ್ಥಾಪನೆ ಮಾಡಿದ ಬ್ರ್ಯಾಂಡ್ ಇದು. ಮಾಝ್ ಎಂಬುದು ಗ್ಲಾಮರಸ್ ಸ್ಟೈಲ್, ಸಮಕಾಲೀನ ಟ್ರೆಂಡ್ ಜೊತೆಗೆ ಆರಾಮದಾಯಕ ತಂಪಾದ ಅನುಭವ ತರುವಂಥ ವಿಶಿಷ್ಟ, ಮೋಹಕ ಪ್ಯಾರಿಸ್ ಜೀವನಶೈಲಿಗೆ ಸಮಾನಾರ್ಥಕ ಪದ ಎಂಬಂತೆಯೇ ಆಗಿಹೋಗಿದೆ.
ಇದೀಗ ಮಾಝ್ ಭಾರತಕ್ಕೆ ಕಾಲಿಡುತ್ತಿರುವುದರಿಂದ ಅತ್ಯುತ್ತಮ ಫ್ರೆಂಚ್ ಫ್ಯಾಷನ್ ಅನ್ನು ಭಾರತೀಯ ಮಹಿಳೆಯರು ಅನುಭವಕ್ಕೆ ಪಡೆಯಬಹುದು. ಜುಡಿತ್ ಮಿಲ್ ಗ್ರೋಮ್ ಕುಟುಂಬ ಸದಸ್ಯರ ಪರಂಪರೆಯನ್ನು ಇದು ಮುಂದುವರಿಸಿಕೊಂಡು ಬಂದಿದೆ. ಮಾಝ್ ಎಂಬ ಹೆಸರು ಅವರ ಹೆಸರಿನ ಮೊದಲ ಅಕ್ಷರಗಳನ್ನು ಪ್ರತಿನಿಧಿಸುತ್ತದೆ. ಇದು ಅವರಲ್ಲಿನ ಒಗ್ಗಟ್ಟಿನ ಸಂಕೇತ ಸಹ ಹೌದು. ಮಾಝ್ ಅನ್ನೋ ಬ್ರ್ಯಾಂಡ್ ಮೂಲಕ ಒಬ್ಬ ಹೆಣ್ಣು ದಿನದ ವಿವಿಧ ಸಮಯದಲ್ಲಿ ಬೇಕಾದಂತೆ ವಿವಿಧ ರೀತಿಯಲ್ಲಿ ಸಿದ್ಧಗೊಳ್ಳಲು ಸಾಧ್ಯವಾಗಬೇಕು ಹಾಗೂ ಅದು ಆಧುನಿಕವಾಗಿಯೂ ಮತ್ತು ಧರಿಸುವುದಕ್ಕೆ ಸುಲಭವಾಗಿಯೂ ಇರಬೇಕು ಎಂಬುದು ಜುಡಿತ್ ಆಲೋಚನೆ. ಆಕೆ ಹುಟ್ಟಿ- ಬೆಳೆದದ್ದು ಮೊರೊಕ್ಕೋದಲ್ಲಿ. ಆ ನಂತರ ತನ್ನ ಕುಟುಂಬದ ಜೊತೆಗೆ ಪ್ಯಾರಿಸ್ ಗೆ ಸ್ಥಳಾಂತರವಾದರು. ಆರಂಭದಲ್ಲಿ ಹೆಣ್ಣುಮಕ್ಕಳನ್ನು ಅತ್ಯುತ್ತಮವಾದ ದಿರಿಸಿನೊಂದಿಗೆ ಸಿದ್ಧಗೊಳಿಸುವುದು ಬಹಳ ನೆಚ್ಚಿನ ಕೆಲಸವಾಗಿತ್ತು. ಆಕೆಯ ಕುಟುಂಬದ ಬಲವಾದ ಕೆಲಸದಲ್ಲಿ ನೀತಿ ಮತ್ತು ಗಟ್ಟಿಯಾದ ಬಂಧದ ಮೂಲಕ ಒಂದು ವಿಶಿಷ್ಟವಾದ ಶೈಲಿಯನ್ನು ರೂಢಿಸಿಕೊಂಡರು. ಹಗುರ, ಬಣ್ಣ ಹಾಗೂ ಹೆಣ್ಣಿನ ದೃಷ್ಟಿಕೋನವನ್ನು ವ್ಯಾಖ್ಯಾನಿಸುವ ವಿಶಿಷ್ಟ ಶೈಲಿ ಅವರದು.

ಮಾಝ್ ಮಳಿಗೆ ವೈಶಿಷ್ಟ್ಯ ಏನೆಂದರೆ, ಪ್ರತಿ ಗ್ರಾಹಕರಿಗೂ ವೈಯಕ್ತಿಕವಾದದ್ದು ಮತ್ತು ವಿಶಿಷ್ಟವಾದ ಸ್ಥಾನವನ್ನು ಒದಗಿಸುತ್ತದೆ. ಇದೊಂದು ರೀತಿಯಲ್ಲಿ ಮತ್ತೊಂದು ಮನೆಯಿದ್ದಂಥ ಭಾವ ನೀಡುತ್ತದೆ. ಇಲ್ಲಿ ಮಹಿಳೆಯರಿಗೆ ಧರಿಸುವುದಕ್ಕೆ ಸಿದ್ಧವಾದಂಥದ್ದು, ಪರಿಕರಗಳ ಸಂಗ್ರಹ, ದಿಟ್ಟ ಹಾಗೂ ಆಫ್ ಬೀಟ್ ಈ ರೀತಿ ತಮ್ಮನ್ನು ತಾವು ಜಗತ್ತಿನ ಎದುರು ತೆರೆದುಕೊಳ್ಳಲು ಬೇಕಾದದ್ದು ದೊರೆಯುತ್ತವೆ.
“ರೋಮಾಂಚಕ ಹಾಗೂ ವೈವಿಧ್ಯದಿಂದ ಕೂಡಿದ ಭಾರತದ ಮಾರುಕಟ್ಟೆಗೆ ಮಾಝ್ ಪರಿಷಯಿಸುವುದಕ್ಕೆ ನಾವು ಬಹಳ ಉತ್ಸಾಹದಿಂದ ಇದ್ದೇವೆ,” ಎಂದು ಮಾಝ್ ಬ್ತ್ಯಾಂಡ್ ಸ್ಥಾಪಕರಾದ ಜುಡಿತ್ ಮಿಲ್ ಗ್ರೋಮ್ ಹೇಳಿದ್ದಾರೆ. “ಭಾರತದ ಶ್ರೀಮಂತ ಸಾಂಸ್ಕೃತಿಕ ಪರಂಪರೆ, ಸಂಪ್ರದಾಯ ಮತ್ತು ಆಧುನಿಕತೆಯ ಕ್ರಿಯಾತ್ಮಕ ಮಿಶ್ರಣದೊಂದಿಗೆ ಸೇರಿ ಸ್ಪೂರ್ತಿದಾಯಕವಾಗಿದೆ. ಈ ಮಳಿಗೆಯು ಭಾರತೀಯ ಗ್ರಾಹಕರ ಜೊತೆಗೆ ಸಂಪರ್ಕ ಸಾಧಿಸುವ ನಮ್ಮ ಅವಕಾಶವನ್ನು ಪ್ರತಿನಿಧಿಸುತ್ತದೆ. ಅಲ್ಲಿ ಫ್ಯಾಷನ್ ಕೇವಲ ಸ್ಟೈಲ್ ಸ್ಟೇಟ್ ಮೆಂಟ್ ಅಲ್ಲ. ಪ್ರತಿ ವ್ಯಕ್ತಿಗೂ ತಾನು ಹೇಗೆ ಮತ್ತು ಏನು ಎಂಬುದನ್ನು ವ್ಯಕ್ತಪಡಿಸುವ ಒಂದು ಮಾರ್ಗವಾಗಿದೆ. ಭಾರತದ ಸ್ಫೂರ್ತಿಯನ್ನು ಆಚರಿಸಲು ಮತ್ತು ಇಲ್ಲಿ ಮಹಿಳೆಯರಿಗೆ ಮಾಝ್ ಅನುಭವವನ್ನು ನೀಡಲು ನಾವು ಎದುರು ನೋಡುತ್ತಿದ್ದೇವೆ,” ಎಂದಿದ್ದಾರೆ.
ಮಾಝ್ ಭಾರತದಲ್ಲಿ ತನ್ನ ಹೆಜ್ಜೆಯನ್ನು ಇಡುತ್ತಿದೆ ಎಂಬುದನ್ನು ಸಂಭ್ರಮಿಸುವುದಕ್ಕಾಗಿ ಬ್ರ್ಯಾಂಡ್ ಕೆಲವು ಎಕ್ಸ್ ಕ್ಲೂಸಿವ್ ಸಂಗ್ರಹಗಳ ಆಯ್ಕೆಯನ್ನು ತರುತ್ತಿದೆ. ಅದರಲ್ಲಿ ಮಾಝ್ 2025ರ ಬೇಸಿಗೆ ಸಂಗ್ರಹ, ಗ್ಲಾಮ್ ಆಫೀಸ್- ಅದು ಪ್ಯಾರಿಸ್ ನಿಂದ ಮಿಲಾನ್ ತನಕದ ಸಂಗ್ರಹ ಒಳಗೊಂಡಿರುತ್ತದೆ. ಆಫೀಸಿಗೆ ತೆರಳುವಾಗ ಬೇಕಾದ ಸ್ಟೈಲ್ ನಿಂದ ಸಂಜೆ ವೇಳೆ ಬದಲಾಗುವ ವಾತಾವರಣಕ್ಕೆ ಏನು ಬೇಕೋ ಆ ರೀತಿ ಮಹಿಳೆಯರಿಗೆ ಅದ್ಭುತವಾದ ಫ್ಯಾಷನ್ ಸಂಗ್ರಹವನ್ನು ಒದಗಿಸಲಾಗುತ್ತದೆ.
ಅಂದ ಹಾಗೆ, ರಿಲಯನ್ಸ್ ಬ್ರಾಂಡ್ಸ್ ಲಿಮಿಟೆಡ್ (ಆರ್‌ಬಿಎಲ್) ಎಂಬುದು ರಿಲಯನ್ಸ್ ರೀಟೇಲ್ ವೆಂಚರ್ಸ್ ಲಿಮಿಟೆಡ್‌ನ ಅಂಗಸಂಸ್ಥೆ. ಇದು 2007 ರಲ್ಲಿ ಫ್ಯಾಷನ್ ಮತ್ತು ಲೈಫ್ ಸ್ಟೈಲ್ ಐಷಾರಾಮಿ ಹಾಗೂ ಪ್ರೀಮಿಯಂ ವಿಭಾಗಗಳಲ್ಲಿ ಜಾಗತಿಕ ಬ್ರ್ಯಾಂಡ್‌ಗಳನ್ನು ಪ್ರಾರಂಭಿಸುವ ಮತ್ತು ರೂಪಿಸುವ ಉದ್ದೇಶದೊಂದಿಗೆ ಕಾರ್ಯಾಚರಣೆಯನ್ನು ಪ್ರಾರಂಭಿಸಿತು. ಸದ್ಯಕ್ಕೆ ಇದರ ಪೋರ್ಟ್‌ಫೋಲಿಯೊದಲ್ಲಿ ಅರ್ಮಾನಿ ಎಕ್ಸ್‌ಚೇಂಜ್, ಬಾಲೆನ್ಸಿಯಾಗ, ಬ್ಯಾಲಿ, ಬೊಟ್ಟೆಗಾ ವೆನೆಟಾ, ಬರ್ಬೆರಿ, ಕೆನಾಲಿ, ಕೋಚ್, ಡೀಸೆಲ್, ಜಾರ್ಜಿಯೊ ಅರ್ಮಾನಿ, ಹ್ಯೂಗೋ ಬಾಸ್, ಜಿಮ್ಮಿ ಚೂ, ಮೈಕೆಲ್ ಕೋರ್ಸ್, ಮುಜಿ, ಪಾಲ್ ಸ್ಮಿತ್, ಸಾಲ್ವಟೋರ್ ಫೆರಾಗಾಮೊ, ಟಿಫಾನಿ ಅಂಡ್ ಕಂ., ಟೋರಿ ಬರ್ಚ್, ವ್ಯಾಲೆಂಟಿನೋ, ವರ್ಸೇಸ್, ಜೆಗ್ನಾ ಮತ್ತು ಇನ್ನೂ ಅನೇಕವು ಸೇರಿವೆ.
ಆರ್‌ಬಿಎಲ್ ಇಂದು ಭಾರತದಲ್ಲಿ 934 ಮಳಿಗೆಗಳು ಮತ್ತು 687 ಶಾಪ್-ಇನ್-ಶಾಪ್‌ಗಳಾಗಿ ವಿಭಜಿಸಲ್ಪಟ್ಟು 1,621ರ ಸಂಖ್ಯೆಯಲ್ಲಿ ಮಳಿಗೆಗಳ ನಿರ್ವಹಣೆ ಮಾಡುತ್ತಿದೆ. ಕಳೆದ ಐದು ವರ್ಷಗಳಲ್ಲಿ, ಆರ್‌ಬಿಎಲ್ ಬ್ರಿಟಿಷ್ ಆಟಿಕೆ ರೀಟೇಲ್ ಹ್ಯಾಮ್ಲೀಸ್ ಅನ್ನು ಸ್ವಾಧೀನಪಡಿಸಿಕೊಳ್ಳುವ ಜೊತೆಗೆ ಸ್ವದೇಶಿ ವಿನ್ಯಾಸಕ ಬ್ರ್ಯಾಂಡ್‌ಗಳನ್ನು ಸೃಷ್ಟಿಸಲು ಮತ್ತು ನಿರ್ವಹಿಸಲು ಹೂಡಿಕೆ ಮಾಡಿದೆ, ಇದು ಈಗ 14 ದೇಶಗಳಲ್ಲಿ 191 ಮಳಿಗೆಗಳನ್ನು ಹೊಂದಿದೆ.