Connect with us

    LATEST NEWS

    ಡೈರಿಯಾಗಿ ಬದಲಾದ ಪಾಸ್ ಪೋರ್ಟ್ – ಶಾಕ್ ಆದ ಅಧಿಕಾರಿ

    ಕೇರಳ ನವೆಂಬರ್ 04: ಪಾಸ್ ಪೋರ್ಟ್ ಒಬ್ಬ ವ್ಯಕ್ತಿಗೆ ಒಂದು ದೇಶದಿಂದ ಸಿಗುವ ಅತ್ಯಂತ ವಿಶ್ವಸನೀಯ ಅಧಿಕೃತ ದಾಖಲೆ, ಅದನ್ನು ಎಷ್ಟು ಜೋಪಾನವಾಗಿ ಇಟ್ಟುಕೊಳ್ಳುತ್ತಾರೆ. ಆದರೆ ಇಲ್ಲೊಂದು ಪಾಸ್ ಪೋರ್ಟ್ ಮಾತ್ರ ಮೊಬೈಲ್ ನಂಬರ್ ಗಳನ್ನು ಬರೆದಿಟ್ಟುಕೊಳ್ಳುವ ಡೈರಿಯಾಗಿ ಬಳಕೆಯಾಗಿದ್ದು. ಪಾಸ್ ಪೋರ್ಟ್ ನವೀಕರಣದ ವೇಳೆ ಪಾಸ್ ಪೋರ್ಟ್ ನೋಡಿದ ಅಧಿಕಾರಿ ಬೆಚ್ಚಿಬಿದ್ದಿದ್ದಾರೆ. ಇದೀಗ ವಿಡಿಯೋ ವೈರಲ್ ಆಗಿದೆ.


    ಕೇರಳದ ವ್ಯಕ್ತಿಯೊಬ್ಬರು ಪಾಸ್​ಪೋರ್ಟ್​ ನವೀರಕರಣಕ್ಕೆಂದು ಪಾಸ್​ಪೋರ್ಟ್​ ಆಫೀಸಿಗೆ ಹೋದಾಗ ಅಲ್ಲಿಯ ಅಧಿಕಾರಿ ಪಾಸ್​ಪೋರ್ಟ್ ತಪಾಸಣೆ ನಡೆಸಿದ್ದಾರೆ. ಅದರ ಅವಸ್ಥೆ ನೋಡಿ ದಿಗ್ಭ್ರಾಂತರಾಗಿದ್ದಾರೆ. ಈ ವಿಡಿಯೋ ಇದೀಗ ವೈರಲ್ ಆಗಿದೆ.
    ಎರಡು ದಿನಗಳ ಹಿಂದೆ ಟ್ವೀಟರ್ ನಲ್ಲಿ ಪೋಸ್ಟ್ ಮಾಡಲಾದ ಈ ವಿಡಿಯೋವನ್ನು ಈತನಕ 8 ಲಕ್ಷಕ್ಕಿಂತಲೂ ಹೆಚ್ಚು ಜನ ನೋಡಿದ್ದಾರೆ. 4,000ಕ್ಕೂ ಹೆಚ್ಚು ಜನರು ಲೈಕ್ ಮಾಡಿದ್ದಾರೆ. ಸುಮಾರು 900 ಜನರು ರೀಪೋಸ್ಟ್ ಮಾಡಿದ್ದಾರೆ. ಸುಮಾರು 270 ಜನರು ಪ್ರತಿಕ್ರಿಯಿಸಿದ್ದಾರೆ.


    ಈ ಪಾಸ್​ಪೋರ್ಟ್​ನೊಂದಿಗೆ ಪ್ರಯಾಣ ಮಾಡುವಾಗ ಅಧಿಕಾರಿ ಅದನ್ನು ಸ್ಟ್ಯಾಂಪ್ ಮಾಡಬೇಕಾದರೆ ಅವನಿಗೆ ಹೇಗನ್ನಿಸಬಹುದು ಎನ್ನುವುದು ಊಹಿಸಿ ಎಂದಿದ್ದಾರೆ ಒಬ್ಬರು. ಅವರು ಬಹುಶಃ ಪಾಸ್​ಪೋರ್ಟ್​ ಅನ್ನು ಈತನಕ ಪ್ರಯಾಣಕ್ಕೆ ಬಳಸಿಯೇ ಇಲ್ಲ ಎನ್ನಿಸುತ್ತದೆ ಎಂದಿದ್ದಾರೆ ಇನ್ನೊಬ್ಬರು. ಖಾಲೀ ಪುಟಗಳನ್ನುಯಾಕೆ ಬಿಡಬೇಕು ಎಂದು ಯೋಚಿಸಿರುವಂತಿದೆ ಎಂದಿದ್ದಾರೆ ಮತ್ತೊಬ್ಬರು.

    Share Information
    Advertisement
    Click to comment

    You must be logged in to post a comment Login

    Leave a Reply