LATEST NEWS
ಆಕೆಯ ವ್ಯಾಪಾರ ವಿಸ್ತರಣೆಯಲ್ಲಿ ಇದು ನಮ್ಮ ಹೂಡಿಕೆ – ಆನಂದ್ ಮಹೀಂದ್ರಾ
ಆಕೆಯ ವ್ಯಾಪಾರ ವಿಸ್ತರಣೆಯಲ್ಲಿ ಇದು ನಮ್ಮ ಹೂಡಿಕೆ – ಆನಂದ್ ಮಹೀಂದ್ರಾ
ಮಂಗಳೂರು ಫೆಬ್ರವರಿ 6: ಬೀದಿಬದಿ ವ್ಯಾಪಾರದಲ್ಲಿ ನೆಲೆಕಂಡು ಸ್ವಾವಲಂಬಿ ಬದುಕಿನ ಛಲತೊಟ್ಟ ಮಹಿಳಾ ಸಾಧಕಿ ಹಳ್ಳಿ ಮನೆ ರೊಟ್ಟಿಸ್‌ನ ಮಾಲಕಿ ಶಿಲ್ಪಾ ಅವರ ಬದುಕಿನಲ್ಲೊಂದು ಹೊಸ ಬೆಳಕು ಮೂಡಿದೆ. ಈಕೆಯ ಜೀವನ ಗಾಥೆಗೆ ಮಹೀಂದ್ರಾ ಕಂಪನಿಯ ಮುಖ್ಯಸ್ಥರೇ ಮಾರು ಹೋಗಿದ್ದಾರೆ. ಮಹಿಳೆಯ ರೊಟ್ಟಿ ಮಾರುವ ಕಾಯಕದ ವಿಸ್ತರಣೆಗಾಗಿ ಮಹೀಂದ್ರಾ ಕಂಪನಿಯಿಂದ ಬೊಲೆರೋ ವಾಹನದ ಕೊಡುಗೆ ನೀಡಿದ್ದಾರೆ.
ಶಿಲ್ಪಾ ಅವರ ಛಲ ಮತ್ತು ಸಾಧನೆ ಬಗ್ಗೆ ಖುದ್ದು ಮಹೀಂದ್ರ ಕಂಪನಿಯ ಅಧ್ಯಕ್ಷ ಆನಂದ್ ಮಹೀಂದ್ರಾ ಇತ್ತೀಚೆಗಷ್ಟೇ ಟ್ವೀಟ್ ಮಾಡಿದ್ದು, ಅವರ ಬದುಕಿಗೆ ಹೊಸ ದಿಕ್ಕನ್ನು ಕಲ್ಪಿಸಲು ಕಂಪನಿಯಿಂದ ನೂತನ ಮಹೀಂದ್ರಾ ಪಿಕಪ್ ವಾಹನ ನೀಡುವುದಾಗಿ ಘೋಷಿಸಿದ್ದರು. ಅದರಂತೆ ಸೋಮವಾರ ಮಂಗಳೂರಿನ ಮಹೀಂದ್ರ ವಾಹನಗಳ ಅಧಿಕೃತ ಡೀಲರ್ ಆಗಿರುವ ಕರ್ನಾಟಕ ಏಜೆನ್ಸಿಸ್‌ನಲ್ಲಿ ಶಿಲ್ಪಾ ಅವರಿಗೆ ಹೊಸ ವಾಹನವನ್ನು ಹಸ್ತಾಂತರಿಸಲಾಯಿತು.
ಮಂಗಳೂರಿನ ಮಣ್ಣಗುಡ್ಡ ಎಂಬಲ್ಲಿ ಕಳೆದ ಎರಡು ವರ್ಷಗಳಿಂದ ಬೊಲೆರೋ ವಾಹನದಲ್ಲಿ ರೊಟ್ಟಿ ಮಾರುತ್ತಲೇ ಹೆಸರು ಗಳಿಸಿದವಳು. ಇತ್ತೀಚೆಗೆ ಆಕೆಯ ಕುರಿತ ಲೇಖನದಿಂದ ಗಮನ ಸೆಳೆದ ಮಹಿಂದ್ರಾ ಕಂಪನಿ ಮುಖ್ಯಸ್ಥ ಆನಂದ್ ಮಹೀಂದ್ರಾ ಸ್ವತಃ ಟ್ವಿಟರ್ ನಲ್ಲಿ ಪ್ರತಿಕ್ರಿಯಿಸಿ, ಮಹಿಳೆಯ ಉದ್ಯಮ ವಿಸ್ತರಣೆಗೆ ಬೊಲೆರೋ ವಾಹನದ ಕೊಡುಗೆಯ ಭರವಸೆ ನೀಡಿದ್ದರು.
ಆ ಬಳಿಕ ಮಂಗಳೂರಿನ ಮಹೀಂದ್ರಾ ಡೀಲರ್ ಕೊಟ್ಟಾರದಲ್ಲಿರುವ ಕರ್ನಾಟಕ ಏಜನ್ಸೀಸ್ ಗೆ ಈ ಬಗ್ಗೆ ಸೂಚನೆ ರವಾನೆಯಾಗಿತ್ತು. ಅದರಂತೆ ಎರಡು ವಾರಗಳ ಹಿಂದೆ ಮಹಿಂದ್ರಾ ಬೊಲೆರೋ ವಾಹನದ ಕೊಡುಗೆಯನ್ನು ಕಂಪನಿ ಅಧಿಕಾರಿಗಳು ಖಚಿತಪಡಿಸಿದ್ದರು. ಇದೀಗ ಕಂಪನಿ ಅಧಿಕಾರಿಗಳು ಸರಳ ಸಮಾರಂಭ ಏರ್ಪಡಿಸಿ, ಕಂಪನಿ ಮುಖ್ಯಸ್ಥರ ಆಶಯದಂತೆ ಬೊಲೆರೋ ವಾಹನವನ್ನು ಮಹಿಳೆಯ ಕೈಗೆ ಹಸ್ತಾಂತರಿಸಿದ್ದಾರೆ.