KARNATAKA
ಮಡಿಕೇರಿ : ಡ್ರಾಪ್ ಕೇಳಿದ್ದ ಅಪ್ರಾಪ್ತೆಯ ಮೇಲೆ ಸಾಮೂಹಿಕ ಅತ್ಯಾಚಾರ, ಐವರ ಬಂಧನ

ಮಡಿಕೇರಿ : ಡ್ರಾಪ್ ಕೇಳಿದ ಅಪ್ರಾಪ್ತೆಯ ಮೇಲೆ ಯುವಕರ ತಂಡ ಸಾಮೂಹಿಕ ಅತ್ಯಾಚಾರ ನಡೆಸಿದ ಹೇಯ ಕೃತ್ಯ ಕೊಡಗಿನಲ್ಲಿ ನಡೆದಿದೆ. ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲ್ಲೂಕಿನ ಕುಟ್ಟ ಸಮೀಪದ ಕಾಫಿ ತೋಟದಲ್ಲಿ ಈ ಘಟನೆ ನಡೆದಿದೆ. ಡ್ರಾಪ್ ಕೇಳಿದ ಬಾಲಕಿ ಮೇಲೆ ತಮ್ಮ ಜೊತೆಯಲ್ಲಿ ಬಂದಿದ್ದ ಯುವಕರೇ ಅತ್ಯಾಚಾರ ಮಾಡಿದ್ದಾರೆ.

ಜು.9ರಂದು ಈ ಘಟನೆ ನಡೆದಿದ್ದು ತಡವಾಗಿ ಬೇಳಕಿಗೆ ಬಂದಿದೆ. ಮಧ್ಯಾಹ್ನ 3.15 ಗಂಟೆಗೆ ಕುಟ್ಟದಿಂದ ನಾಗರಹೊಳೆ ಕಡೆ ಹೋಗುವ ಮಾರ್ಗದಲ್ಲಿ ಇಬ್ಬರು ಅಪ್ರಾಪ್ತ ಬಾಲಕಿಯರು ಹಾಗೂ ಮೂರು ಮಂದಿ ಯುವಕರು ತೆರಳುತ್ತಿದ್ದರು. ಈ ವೇಳೆ ಕುಟ್ಟ ಕಡೆಯಿಂದ ಬರುತ್ತಿದ್ದ ಕಾರನ್ನು ತಡೆದು ಕಾರಿನಲ್ಲಿದ್ದ ಇಬ್ಬರು ಅಪರಿಚಿತರೊಂದಿಗೆ ತಮ್ಮನ್ನು ನಾಗರಹೊಳೆ ಕಡೆ ಬಿಡುವಂತೆ ಬಾಲಕಿಯರು ಕೇಳಿದ್ದರು. ಹೀಗಾಗಿ ಕಾರಿನಲ್ಲಿ ಇಬ್ಬರು ಅಪ್ರಾಪ್ತ ಬಾಲಕಿಯರು ಹಾಗೂ ಮೂರು ಮಂದಿ ಯುವಕರು ಕೂಡ ಪ್ರಯಾಣಿಸಿದ್ದಾರೆ. ಸ್ವಲ್ಪ ದೂರ ತೆರಳಿದ ನಂತರ ರಸ್ತೆ ಬದಿಯ ಕಾಫಿ ತೋಟದ ಬಳಿ ಕಾರಿನಲ್ಲಿದ್ದ ಅಪರಿಚಿತ ಇಬ್ಬರು ವ್ಯಕ್ತಿಗಳು ಓರ್ವ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದಾರೆ. ಈ ವೇಳೆ ಜೊತೆಯಲ್ಲಿ ಬಂದಿದ್ದ ಇತರ ಮೂರು ಮಂದಿ ಯುವಕರು ಕೂಡ ಮತ್ತೋರ್ವ ಅಪ್ರಾಪ್ತೆಯ ಮೇಲೆ ಅತ್ಯಾಚಾರಕ್ಕೆ ಪ್ರಯತ್ನಿಸಿದ್ದಾರೆ ಎನ್ನಲಾಗಿದೆ. ಘಟನಾಸ್ಥಳಕ್ಕೆ ಕೊಡಗು ಎಸ್ಪಿ ರಾಮರಾಜನ್ ಭೇಟಿ ನೀಡಿ ಪರಿಶೀಲಿಸಿದ್ದಾರೆ.
Continue Reading