Connect with us

  LATEST NEWS

  ಕೇರಳದಲ್ಲಿ ಇಬ್ಬರರು ಮಕ್ಕಳು ಸೇರಿ ಒಂದೇ ಕುಟುಂಬದ ನಾಲ್ವರು ಬೆಂಕಿಗಾಹುತಿ..!

  ಕೊಚ್ಚಿ : ಇಬ್ಬರು ಮಕ್ಕಳು ಸೇರಿ ಒಂದೇ ಕುಟುಂಬದ ನಾಲ್ವರ  ಶವ ಸುಟ್ಟ ಸ್ಥಿತಿಯಲ್ಲಿ  ಕೇರಳದ ಅಂಗಮಾಲಿಯ ಮನೆಯೊಂದಲ್ಲಿ ಪತ್ತೆಯಾಗಿದೆ.

  ಶವಗಳು ಸಿಕ್ಕ ಮನೆಯ  ಕೋಣೆಯಲ್ಲಿ ಪೆಟ್ರೋಲ್ ಕ್ಯಾನ್ ಇಟ್ಟ ಕುರುಹು ಸಿಕ್ಕಿದ್ದು ಇದೊಂದು ಸಾಮೂಹಿಕ ಆತ್ಮಹತ್ಯೆ ಎಂದು ಪೊಲೀಸರು ಶಂಕಿಸಿದ್ದಾರೆ. ಮೃತರನ್ನು ಬಿನೀಶ್ (45), ಅವರ ಪತ್ನಿ ಅನುಮೋಲ್ ಮ್ಯಾಥ್ಯೂ (40), ಮಕ್ಕಳಾದ ಜೊವಾನ್ನಾ (8) ಮತ್ತು ಜಸ್ವಿನ್ (5) ಎಂದು ಗುರುತಿಸಲಾಗಿದೆ. ಮೃತ ಬಿನೀಶ್ ಪೆಟ್ರೋಲ್ ಖರೀದಿಸುತ್ತಿರುವ ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರು  ವಶಪಡಿಸಿಕೊಂಡಿದ್ದು ಇದರೊಂದಿಗೆ ಕುಟುಂಬವು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ತೀರ್ಮಾನಕ್ಕೆ ಪೊಲೀಸರು ಬಂದಿದ್ದಾರೆ. ಉದ್ಯಮಿಯಾಗಿದ್ದ ಬಿನೀಶ್ ಅಂಗಮಾಲಿಯ ಅಂಗಡಿಕಡವು ಎಂಬಲ್ಲಿ ವಾಸವಿದ್ದು ಭಾರಿ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದರು ಎನ್ನಲಾಗಿದೆ. ಮನೆಯ ನೆಲಮಹಡಿಯಲ್ಲಿ ಮಲಗಿದ್ದ ಬಿನೀಶ್ ಅವರ ತಾಯಿ ಚಿನ್ನಮ್ಮ ಅವರು ಮೇಲಿನ ಕೋಣೆಯಲ್ಲಿ ಬೆಂಕಿ ಹರಡುವುದನ್ನು ಮೊದಲು ನೋಡಿದ್ದು ಸಹಾಯಕ್ಕೆ ಕೂಗಿದ್ದಾರೆ, ಸ್ಥಳೀಯರು  ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿದ್ದಾರೆ. ಮೇಲಿನ ಕೋಣೆಯಲ್ಲಿ ಮಾತ್ರ ಬೆಂಕಿ ಹೇಗೆ ಕಾಣಿಸಿಕೊಂಡಿತು ಎಂಬ ಬಗ್ಗೆ ಪೊಲೀಸರಿಗೆ ಅನುಮಾನವಿತ್ತು. ನಂತರದ ತನಿಖೆಯ ಸಮಯದಲ್ಲಿ, ಪೊಲೀಸರಿಗೆ ನಿರ್ಣಾಯಕ ಮಾಹಿತಿ ಸಿಕ್ಕಿತು, ಅದು ಕುಟುಂಬವು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ತೀರ್ಮಾನಕ್ಕೆ ಕಾರಣವಾಯಿತು.

   

  Share Information
  Advertisement
  Click to comment

  You must be logged in to post a comment Login

  Leave a Reply