Connect with us

KARNATAKA

ಮಡಿಕೇರಿ: ಚಾಲಕನ ನಿಯಂತ್ರಣ ತಪ್ಪಿ KSRTC ಬಸ್ ಅಪಘಾತ – ಜನರ ರಕ್ಷಣೆಗೆ ಮುಂದಾದ ಶಾಸಕ ಅಪ್ಪಚ್ಚು ರಂಜನ್

ಮಡಿಕೇರಿ, ಆಗಸ್ಟ್ 13: ಹಾಸನದಿಂದ ಮಡಿಕೇರಿಗೆ ಬರುತ್ತಿದ್ದ ಕೆಎಸ್‍ಆರ್‌ಟಿಸಿ ಬಸ್ ಒಂದು ಚಾಲಕನ ನಿಯಂತ್ರಣ ತಪ್ಪಿ ಅಪಘಾತಕ್ಕೀಡಾಗಿದ್ದು, ಬಸ್‍ನಲ್ಲಿದ್ದ ಪ್ರಯಾಣಿಕರಿಗೆ ಗಂಭೀರ ಗಾಯಗಳಾಗಿರುವ ಘಟನೆ ಕೊಡಗು ಜಿಲ್ಲೆಯ ಕುಶಾಲನಗರ ತಾಲೂಕಿನ ಆನೆಕಾಡು ತೊಂಡೂರು ಬಳಿ ನಡೆದಿದೆ.

ಇಂದು ಬೆಳಗ್ಗೆ ಹಾಸನದಿಂದ ಮಡಿಕೇರಿ ಬಸ್ ನಿಲ್ದಾಣಕ್ಕೆ ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದ ವೇಳೆ ಕುಶಾಲನಗರದ ಆನೆಕಾಡು ತೊಂಡೂರು ಬಳಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಒಂದು ಬದಿಗೆ ಬಸ್ಸು ವಾಲಿದೆ. ಇದರಿಂದಾಗಿ ಬಸ್ಸಿನೊಳಗಿದ್ದ 50ಕ್ಕೂ ಹೆಚ್ಚು ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಕೆಲವರ ಸ್ಥಿತಿ ಗಂಭೀರವಾಗಿದೆ.

ಇದೇ ವೇಳೆ ಕುಶಾಲನಗರ ಮಾರ್ಗವಾಗಿ ಬರುತ್ತಿದ್ದ ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್ ಅವರು ಬಸ್ಸು ಅವಘಡವನ್ನು ಕಂಡು ಸಾರ್ವಜನಿಕರೊಂದಿಗೆ ಸೇರಿ ಜನರ ರಕ್ಷಣೆಗೆ ಮುಂದಾದರು. ಬಸ್ಸು ಒಂದು ಕಡೆ ವಾಲಿದ್ದರಿಂದ ಬಸ್ಸಿನ ತುರ್ತು ಬಾಗಿಲು ತೆರೆದು ಪೊಲೀಸರು ಜನರ ರಕ್ಷಣೆಯನ್ನು ಮಾಡಿದರು. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡವರಿಗೆ ಕುಶಾಲನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಮಡಿಕೇರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಸದ್ಯ ಬಸ್ಸು ಅಪಘಾತಕ್ಕೆ ಸಂಬಂಧಿಸಿದಂತೆ ಕುಶಾಲನಗರ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *