Connect with us

LATEST NEWS

ಕುಂದಾಪುರ – ಭಜರಂಗದಳದಿಂದ ಆಕರ್ಷಕ ಪಂಜಿನ ಮೆರವಣಿಗೆ

ಕುಂದಾಪುರ ಅಗಸ್ಟ್ 13 : ಅಖಂಡ ಭಾರತ ಸಂಕಲ್ಪ ದಿನದ ಅಂಗವಾಗಿ ವಿಶ್ವಹಿಂದೂ ಪರಿಷತ್, ಭಜರಂಗದಳ ಕುಂದಾಪುರ ನಗರ, ಬಿ.ಸಿ.ರೋಡ್ ಘಟಕ ವತಿಯಿಂದ ಕುಂದಾಪುರ ಬಸ್ರೂರು ಹುಣಸೆಕಟ್ಟೆ ಬ್ರಿಡ್ಜ್ ಬಳಿಯಿಂದ ಕುಂದಾಪುರ ಶಾಸ್ತ್ರಿ ಸರ್ಕಲ್ ವರೆಗೆ ಶುಕ್ರವಾರ ರಾತ್ರಿ ಆಕರ್ಷಕ ಪಂಜಿನ ಮೆರವಣಿಗೆ ನಡೆಯಿತು.


ಶುಕ್ರವಾರ ರಾತ್ರಿ ಬಸ್ರೂರು ಹುಣಸೆಕಟ್ಟೆ ಬ್ರಿಡ್ಜ್ ಬಳಿಯಿಂದ ಹೊರಟ ಮೆರವಣಿಗೆಯು ಪಂಜುಗಳ ಬೆಳಕಿನಿಂದ ಆಕರ್ಷಿತವಾಗಿತ್ತು. ಬೃಹತ್ ರಾಷ್ಟ್ರಧ್ವಜಗಳು ಪಂಜಿನ ಮೆರವಣಿಗೆಗೆ ಮೆರುಗು ನೀಡುತ್ತಿದ್ದವು. ಕಾರ್ಯಕರ್ತರ ಘೋಷಣೆಗಳು ಮುಗಿಲು ಮುಟ್ಟಿದ್ದವು.

ಕುಂದಾಪುರದ ಖಾಸಗೀ ಬಸ್ ನಿಲ್ದಾಣದ ವರೆಗೆ ಸಾಗಿ ಬಂದ ಪಂಜಿನ ಮೆರವಣಿಗೆ ಶಾಸ್ತ್ರಿ ವೃತ್ತದಲ್ಲಿ ಸಮಾಗಮಗೊಂಡಿತು. ನೂರಾರು ಹಿಂದೂ ಕಾರ್ಯಕರ್ತರು ಭಾಗವಹಿಸಿದ್ದರು.

Advertisement
Click to comment

You must be logged in to post a comment Login

Leave a Reply