LATEST NEWS
ಈಜು ಸ್ಪರ್ಧೆಯಲ್ಲಿ ರಾಷ್ಟ್ರೀಯ ದಾಖಲೆ ಬರೆದ ಮಾಧವನ್ ಪುತ್ರ ವೇದಾಂತ್

ಭುವನೇಶ್ವರ, ಜುಲೈ 18: ಬಹುಭಾಷಾ ನಟ ಆರ್. ಮಾಧವನ್ ಅವರ ಪುತ್ರ ವೇದಾಂತ್ ರಾಷ್ಟ್ರ ಮಟ್ಟದ ಈಜು ಸ್ಪರ್ಧೆಯಲ್ಲಿ ಹೊಸ ದಾಖಲೆ ಬರೆದಿದ್ದಾರೆ.
ವೇದಾಂತ್ 48ನೇ ಜೂನಿಯರ್ ರಾಷ್ಟ್ರೀಯ ಅಕ್ವಾಟಿಕ್ ಚಾಂಪಿಯನ್‌ಶಿಪ್‌ನಲ್ಲಿ ಗೆದ್ದು, ಹೊಸ ಇತಿಹಾಸ ಸೃಷ್ಟಿಸಿದ್ದಾರೆ. ಭಾನುವಾರ ಭುವನೇಶ್ವರದಲ್ಲಿ ನಡೆದ 1,500 ಮೀ. ಫ್ರೀಸ್ಟೈಲ್ ಈಜು ಸ್ಪರ್ಧೆಯಲ್ಲಿ ವೇದಾಂತ್ ಕೇವಲ 16:01.73 ಸೆಕೆಂಡ್ ಗಳಲ್ಲಿ ಗುರಿ ಮುಟ್ಟಿದ್ದರು. ಇದಕ್ಕೂ ಮುನ್ನ 2017 ರಲ್ಲಿ 16:06.43 ಸೆಕೆಂಡ್ ಗಳ ಅಂತರದಲ್ಲಿ ಗುರಿ ತಲುಪುವ ಮೂಲಕ ಅದ್ವೈತ್ ದಾಖಲೆ ಬರೆದಿದ್ದರು ಇದೀಗ ವೇದಾಂತ್ ಅದ್ವೈತ್ ಅವರ ದಾಖಲೆಯನ್ನು ಮುರಿದಿದ್ದಾರೆ.

https://twitter.com/ActorMadhavan/status/1548656807631278080?ref_src=twsrc%5Etfw%7Ctwcamp%5Etweetembed%7Ctwterm%5E1548656807631278080%7Ctwgr%5E%7Ctwcon%5Es1_&ref_url=https%3A%2F%2Fpublictv.in%2Fmadhavans-son-vedaant-breaks-national-junior-swimming-record%2F
ಈ ಸಂಭ್ರಮದ ವಿಚಾರವನ್ನು ಮಾಧವನ್ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡು ಖುಷಿ ವ್ಯಕ್ತಪಡಿಸಿದ್ದಾರೆ. ಟ್ವಿಟ್ಟರ್‌ನಲ್ಲಿ ಈ ದಾಖಲೆ ಬಗ್ಗೆ ತಿಳಿಸಿರುವ ಮಾಧವನ್, ಎಂದಿಗೂ ಆಗಲ್ಲ ಎಂದು ಯಾವತ್ತೂ ಹೇಳಬೇಡಿ. 1,500 ಮೀಟರ್ ಫ್ರೀಸ್ಟೈಲ್ ರಾಷ್ಟ್ರೀಯ ಜೂನಿಯರ್ ದಾಖಲೆ ಇದೀಗ ಮುರಿದಿದೆ ಎಂದು ಬರೆದಿದ್ದು, ವೀಡಿಯೋವನ್ನು ಹಂಚಿಕೊಂಡಿದ್ದಾರೆ.