Connect with us

    KARNATAKA

    ಶಿವಮೊಗ್ಗದಲ್ಲಿ ಹುಚ್ಚು ನಾಯಿ ಹಾವಳಿ : ಮಗು ಸೇರಿ ಐವರ ಮೇಲೆ ದಾಳಿ..!

    ಶಿವಮೊಗ್ಗದಲ್ಲಿ ಹುಚ್ಚು ನಾಯಿಗಳ ಹಾವಳಿ ಜಾಸ್ತಿಯಾಗಿದ್ದು ಮಗು ಸೇರಿ ಐವರ ಮೇಲೆ ಹುಚ್ಚು ನಾಯಿ ದಾಳಿ ನಡೆಸಿದೆ.

    ಶಿವಮೊಗ್ಗ: ಶಿವಮೊಗ್ಗದಲ್ಲಿ ಹುಚ್ಚು ನಾಯಿಗಳ ಹಾವಳಿ ಜಾಸ್ತಿಯಾಗಿದ್ದು ಮಗು ಸೇರಿ ಐವರ ಮೇಲೆ ಹುಚ್ಚು ನಾಯಿ ದಾಳಿ ನಡೆಸಿದೆ.

    ಶಿವಮೊಗ್ಗದ ಬಿ.ಬೀರನಹಳ್ಳಿ ಗ್ರಾಪಂ ವ್ಯಾಪ್ತಿಯ ಹೊಳೆಬೆಳಗಲು ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮಗುವಿಗೆ ಗಂಭೀರ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.

    ಶಾಲಾ ವಾಹನದಿಂದ ಇಳಿದು ಮನೆಗೆ ಹೋಗುವಾಗ ಆರು ವರ್ಷದ ಬಾಲಕಿ ಮೇಲೆ ಹುಚ್ಚು ನಾಯಿ ದಾಳಿ ನಡೆಸಿದ್ದು, ನಾಯಿ ದಾಳಿಯಿಂದ ಮಗುವಿನ ಮುಖದ ಮೇಲೆ ಗಾಯಗಳಾಗಿವೆ.

    ಕೂಡಲೇ ಗಮನಿಸಿದ ಸ್ಥಳಿಯರು ಆಕೆಯನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

    ಮತ್ತೊಂದು ಮಗುವಿನ ಮೇಲೂ ನಾಯಿ ದಾಳಿ ನಡೆಸುವ ವಿಫಲ ಯತ್ನ ಮಾಡಿದೆ.

    ಈ ಮಧ್ಯೆ ಇತರ ಮೂವರ ಮೇಲೂ ಜೊತೆಗೆ ಹಸುವಿನ ಮೇಲೂ ನಾಯಿ ದಾಳಿ ನಡೆಸಿದ್ದು ಹುಚ್ಚು ನಾಯಿಯ ದಾಳಿಗೆ ಜನತೆ ಭಯಭೀತರಾಗಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply