Connect with us

LATEST NEWS

ಬಸ್ ಒಳಗೆ ಆಟವಾಡುತ್ತಿದ್ದ ಬಾಲಕಿಯನ್ನು ಅತ್ಯಾಚಾರ ಮಾಡಿ, ಗೋಣಿ ಚೀಲದಲ್ಲಿ ತುಂಬಿಸಿ ರಸ್ತೆಗೆ ಎಸೆದ ಕಾಮುಕ

ಮುಂಬೈ: ಬಸ್ ಚಾಲಕನೊಬ್ಬ 4 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಗೋಣಿ ಚೀಲದೊಳಗೆ ತುಂಬಿಸಿ ರಾಷ್ಟ್ರೀಯ ಹೆದ್ದಾರಿ ಬಳಿ ಎಸೆದಿರುವ ಘಟನೆ ನಡೆದಿದೆ. ಭಯಂದರ್​ನ ಭೋಲಾರಂ ಕೊಳೆಗೇರಿ ಬಳಿ ನಿಲ್ಲಿಸಿದ್ದ ಐಷಾರಾಮಿ ಬಸ್ ಒಳಗೆ ಬಾಲಕಿ ಆಟವಾಡುತ್ತಿದ್ದಳು. ಈಕೆಯ ಜತೆಗೆ ಇತರ ಮಕ್ಕಳೂ ಆಟವಾಡುತ್ತಿದ್ದರು. ಇದೇ ವೇಳೆ ಚಾಲಕ ಬಂದಾಗ ಉಳಿದ ಮಕ್ಕಳು ಬಸ್​ನಿಂದ ಇಳಿದಿದ್ದಾರೆ. ಆದರೆ ಬಾಲಕಿ ಮಾತ್ರ ಇಳಿಯಲು ಆಗದೇ ಒಳಗೇ ಉಳಿದುಬಿಟ್ಟಿದ್ದಾಳೆ.


ಬಸ್ಸು ಚಲಿಸಲು ಶುರುವಾದ ಮೇಲೆ ಬಾಲಕಿ ಚೀರಿಕೊಂಡಿದ್ದಾಳೆ. ಆಗಲೇ ಚಾಲಕನಿಗೆ ಆಕೆ ಬಸ್ಸಿನಲ್ಲಿ ಇರುವುದು ತಿಳಿದಿದೆ. ಆತ ಆಕೆಯನ್ನು ನಿರ್ಜನ ಪ್ರದೇಶಕ್ಕೆ ಕೊಂಡೊಯ್ದಿದ್ದಾನೆ. ನಂತರ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಈ ಸಂದರ್ಭ ಹುಡುಗಿ ಪ್ರಜ್ಞೆ ಕಳೆದುಕೊಂಡಿದ್ದಾಳೆ. ಅದೇ ವೇಳೆ ಚಾಲಕ ಆಕೆಯ ಕತ್ತು ಹಿಸುಕಿದ್ದು. ಅವಳು ಸತ್ತಳೆಂದು ತಿಳಿದು ಆಕೆಯನ್ನು ಗೋಣಿಚೀಲದಲ್ಲಿ ಕಟ್ಟಿ ಮುಂಬೈ- ಅಹಮ್ಮದಾಬಾದ್ ಹೆದ್ದಾರಿಯಲ್ಲಿರುವ ಪೆಟ್ರೋಲ್ ಪಂಪ್ ಬಳಿ ಎಸೆದು ಹೋಗಿದ್ದಾನೆ. ಮರುದಿನ ಬೆಳಗ್ಗೆ ಪೆಜ್ಞೆ ಬಂದ ಬಳಿಕ ಗೋಣಿ ಚೀಲದೊಳಗೆ ಚಲನೆ ಕಾಣಿಸಿತ್ತು. ಹೀಗಾಗಿ ಸ್ಥಳೀಯರು ಗೋಣಿಚೀಲವನ್ನು ತೆರೆದು ನೋಡಿದಾಗ ಅದರೊಳಗೆ ಬಾಲಕಿ ಇರುವುದು ಬೆಳಕಿಗೆ ಬಂದಿದೆ. ಕೂಡಲೇ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಆಕೆಯಿನ್ನೂ ಉಸಿರಾಡುತ್ತಿದ್ದುದರಿಂದ ಕೂಡಲೇ ಆಸ್ಪತ್ರೆಗೆ ಸಾಗಿಸಿದ್ದಾರೆ. ಅಷ್ಟರಲ್ಲಿಯೇ ತನ್ನ ಮಗಳು ಕಾಣೆಯಾಗಿರುವುದಾಗಿ ತಾಯಿ ಪೊಲೀಸರಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ಹತ್ತಿರದ ಪ್ರದೇಶಗಳ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಘಟನೆ ಬೆಳಕಿಗೆ ಬಂದಿದೆ. ಚಾಲಕನನ್ನು ಬಂಧಿಸಲಾಗಿದ್ದು, ಭಾರತೀಯ ದಂಡ ಸಂಹಿತೆ (ಐಪಿಸಿ) ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೊಕ್ಸೊ) ಕಾಯ್ದೆಯ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಆತನ ವಿರುದ್ಧ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದ್ದು, ಆತನನ್ನು ಬಂಧಿಸಲಾಗಿದೆ

Share Information
Continue Reading
Advertisement
Click to comment

Leave a Reply

Your email address will not be published. Required fields are marked *