LATEST NEWS
ಹರೇಕಳದಲ್ಲಿ ಎಸ್ ಡಿಪಿಐ – ಕಾಂಗ್ರೇಸ್ ಕಾರ್ಯಕರ್ತರ ನಡುವೆ ಮಾರಾಮಾರಿ
ಮಂಗಳೂರು ಡಿಸೆಂಬರ್ 22: ಹರೇಕಳ ಗ್ರಾಮದ ನಾಲ್ಕನೇ ವಾರ್ಡನಲ್ಲಿ ಮತ ಚಲಾಯಿಸುವ ವಿಚಾರದಲ್ಲಿ ಕಾಂಗ್ರೆಸ್ ಮತ್ತು ಎಸ್ಡಿಪಿಐ ಬೆಂಬಲಿತರ ಮಾರಾಮಾರಿ ನಡೆದಿದೆ.
ಹರೇಕಳ ಶ್ರೀರಾಮಕೃಷ್ಣ ಫ್ರೌಢಶಾಲೆಯ ಮತಗಟ್ಟೆ ಮುಂಭಾಗ ಈ ಘಟನೆ ನಡೆದಿದ್ದು, ಕಾಂಗ್ರೆಸ್ ಕಾರ್ಯಕರ್ತರು ಬೂತ್ ಬಳಿ ಜಮಾಯಿಸಿ ಮತದಾರರನ್ನು ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆಂದು ಆರೋಪಿಸಿ ಎಸ್ ಡಿಪಿಐ ಕಾರ್ಯಕರ್ತರು ಮಾತಿಗೆ ಇಳಿದಿದ್ದರು. ಈ ವೇಳೆ ಇತ್ತಂಡಗಳ ನಡುವೆ ವಾಗ್ವಾದ ನಡೆದು ಹೊಯ್ಕೈಗೆ ತಲುಪಿದೆ. ಈ ಸಂದರ್ಭ ಎಸ್ಡಿಪಿಐ ಬೆಂಬಲಿತ ನೂಮಾನ್ ಎಂಬಾತ ಕಾಂಗ್ರೆಸ್ ಮುಖಂಡ ಝಕರಿಯಾ ಮಲಾರ್ ಮೇಲೆ ಹಲ್ಲೆ ನಡೆಸಿದ್ದಾರೆ.
ಘಟನೆ ಸಂದರ್ಭದಲ್ಲಿ ಎರಡೂ ಪಕ್ಷದ ಬೆಂಬಲಿತರು ಸ್ಥಳದಲ್ಲಿ ಜಮಾಯಿಸಿದ್ದು ಇನ್ನಷ್ಟು ಅನಾಹುತ ಆಗುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಪೊಲೀಸರು ಲಾಠಿ ಬೀಸಿ ಜನರನ್ನು ಚದುರಿಸಿದರು.
Facebook Comments
You may like
-
ಪರಿಸರ ಉಳಿಸುವಂತೆ ಹಸಿರು ದಳದಿಂದ ಆರಂಭವಾಗಿದೆ ಜಾಗೃತಿಯ ಆಗ್ರಹ…..
-
ಕಾಲೇಜು ವಿಧ್ಯಾರ್ಥಿನಿಗೆ ಅಮಲು ಪದಾರ್ಥ ಕುಡಿಸಿ ಅತ್ಯಾಚಾರ – ಆರೋಪಿ ಸೆರೆ
-
ಖಾಸಗಿ ಬಸ್ ಚಾಲಕನ ಕೊಲೆ ಯತ್ನ – ಆರೋಪಿ ಬೈಕ್ ಸವಾರ ಆರೆಸ್ಟ್
-
ಗುದದ್ವಾರದಲ್ಲಿ ಚಿನ್ನ ಇಟ್ಟು ಅಕ್ರಮ ಸಾಗಾಟಕ್ಕೆ ಯತ್ನ….ಆರೋಪಿ ಸೆರೆ
-
ಖಾಸಗಿ ಬಸ್ ನಲ್ಲಿ ಯುವತಿಗೆ ಲೈಂಗಿಕ ಕಿರುಕುಳ ನೀಡಿದ್ದ ಆರೋಪಿ ಆರೆಸ್ಟ್ – ಪೊಲೀಸರ ಎದುರೇ ಕಪಾಳಕ್ಕೆ ಬಾರಿಸಿದ ಯುವತಿ
-
ಆರ್ಥಿಕ ಮುಗ್ಗಟ್ಟಿಗೆ ಯವ ಉದ್ಯಮಿ ನೇಣು ಬಿಗಿದು ಆತ್ಮಹತ್ಯೆ
You must be logged in to post a comment Login