LATEST NEWS
ಡೈವೋರ್ಸ್ ನ್ನೆ ಹಣ ಮಾಡುವ ದಂಧೆ ಮಾಡಿಕೊಂಡಿದ್ದ ಖತರ್ನಾಕ್ ಲೇಡಿ ಅರೆಸ್ಟ್
ಹೊಸದಿಲ್ಲಿ ಡಿಸೆಂಬರ್ 24: ಡೈವೋರ್ಸ್ ನ್ನೆ ಹಣಮಾಡುವ ದಂಧೆ ಮಾಡಿಕೊಂಡ ಮಹಿಳೆ ಕೊನೆಗೂ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾಳೆ. 10 ವರ್ಷಗಳಲ್ಲಿ ಮೂರು ಮದುವೆಯಾಗಿ ವಿಚ್ಚೇದನ ನೀಡಿ ಬರೋಬ್ಬರಿ 1.25 ಕೋಟಿ ಜೀವನಾಂಶ ಪಡೆದಿದ್ದ ಖತರ್ನಾಕ್ ಲೇಡಿ ಇವಳು.
ಇದೀಗ ಪೊಲೀಸ ಅತಿಥಿಯಾಗಿರುವ ಈಕೆ ಉತ್ತರಾಖಂಡದ ಸೀಮಾ ಅಲಿಯಾಸ್ ನಿಕ್ಕಿ ಎಂಬಾಕೆ, ಮ್ಯಾಟ್ರಿಮೋನಿಯಲ್ ವೆಬ್‌ಸೈಟ್ ಮೂಲಕ ಪತ್ನಿಯ ಮರಣ ಹಾಗೂ ವಿಚ್ಛೇದನ ನಂತರ ಒಬ್ಬಂಟಿಯಾಗಿ ವಾಸಿಸುತ್ತಿದ್ದ ಶ್ರೀಮಂತರನ್ನು ಗುರಿಯಾಗಿಸಿಕೊಂಡು ಮದುವೆಯ ನಾಟಕವಾಡುತ್ತಿದ್ದಳು. ನಂತರ ವಿಚ್ಛೇದನಕ್ಕಾಗಿ ಹಲವು ಪ್ರಕರಣ ದಾಖಲಿಸುತ್ತಿದ್ದಳು. ಕೊನೆಗೆ ರಾಜಿ ಮಾಡಿಕೊಳ್ಳುವುದಾಗಿ ತಿಳಿಸಿ ಲಕ್ಷಾಂತರ ರೂಪಾಯಿ ವಸೂಲಿ ಮಾಡುತ್ತಿದ್ದಳು.
ಬಂಧಿತ ಆರೋಪಿ ಸೀಮಾ, 2013ರಲ್ಲಿ ಆಗ್ರಾದ ಉದ್ಯಮಿಯೊಬ್ಬರನ್ನು ಮೊದಲು ಮದುವೆಯಾಗಿದ್ದಳು. ಕೆಲ ಸಮಯದ ನಂತರ ಆ ವ್ಯಕ್ತಿಯ ಕುಟುಂಬದ ವಿರುದ್ಧ ಪ್ರಕರಣ ದಾಖಲಿಸಿ, ನಂತರ ರಾಜಿ ಮಾಡಿಕೊಂಡು 75 ಲಕ್ಷ ರೂ. ಪಡೆದುಕೊಂಡಿದ್ದಳು. 2017ರಲ್ಲಿ ಗುರುಗ್ರಾಮ್‌ನ ಸಾಫ್ಟ್‌ವೇರ್ ಇಂಜಿನಿಯರ್ ಒಬ್ಬನನ್ನು ಮದುವೆ ಆಗಿದ್ದಾಳೆ. ಬಳಿಕ ವಿಚ್ಛೇದನ ನಾಟಕವಾಡಿ 10 ಲಕ್ಷ ರೂ. ವಂಚಿಸಿದ್ದಾಳೆ.
ಸೀಮಾ, ಜೈಪುರ ಮೂಲದ ಉದ್ಯಮಿಯನ್ನು 2023ರಲ್ಲಿ ವಿವಾಹವಾಗಿದ್ದಾಳೆ. ಮದುವೆಯಾ ಕೆಲ ತಿಂಗಳಲ್ಲಿ 36 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಮತ್ತು ನಗದಿನೊಂದಿಗೆ ಮನೆಯಿಂದ ಪರಾರಿಯಾಗಿದ್ದಾಳೆ. ಬಳಿಕ ಕುಟುಂಬಸ್ಥರು ದೂರು ನೀಡಿದ್ದರು. ಪ್ರಕರಣದ ದಾಖಲಿಸಿಕೊಂಡು ತನಿಖೆಗಿಳಿದ ಜೈಪುರ ಪೊಲೀಸರು, ವಂಚಕಿ ಸೀಮಾಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಸೀಮಾ ಮ್ಯಾಟ್ರಿಮೋನಿಯಲ್ ವೆಬ್‌ಸೈಟ್‌ಗಳಿಂದ ವಿಚ್ಛೇದಿತ ಹಾಗೂ ಎರಡನೇ ಮದುವೆಯಾಗಲು ಸಿದ್ಧರಿದ್ದ ಪುರುಷರ ವಿವರಗಳನ್ನು ಪಡೆದುಕೊಳ್ಳುತ್ತಿದ್ದಳು. ನಂತರ ಮದುವೆಯ ನಾಟಕವಾಡಿ ವಂಚಿಸುತ್ತಿದ್ದಳು. ವಿವಿಧ ಪ್ರಕರಣಗಳಲ್ಲಿ ಒಟ್ಟು 1.25 ಕೋಟಿ ರೂ. ವಸೂಲಿ ಮಾಡಿದ್ದಾಳೆ ಎಂದು ಪೊಲೀಸರ ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.