LATEST NEWS
ದಿಲ್ಲಿ ಇಸ್ರೇಲ್ ರಾಯಬಾರಿ ಕಚೇರಿ ಬಳಿ ಬಾಂಬ್ ಸ್ಪೋಟ – ಹೊಣೆ ಹೊತ್ತ ಜೈಶ್-ಉಲ್-ಹಿಂದ್ ಉಗ್ರ ಸಂಘಟನೆ
ಹೊಸದಿಲ್ಲಿ:ನಿನ್ನೆ ಇಸ್ರೇಲ್ ರಾಯಭಾರ ಕಚೇರಿ ಬಳಿ ನಡೆ ಐಇಡಿ ಸ್ಫೋಟಕ್ಕೆ ಸಂಬಂಧಪಟ್ಟಂತೆ ಸ್ಪೋಟವನ್ನು ತಾನೇ ಮಾಡಿರುವುದಾಗಿ ಜೈಶ್-ಉಲ್-ಹಿಂದ್ ಎನ್ನುವ ಉಗ್ರ ಒಪ್ಪಿಕೊಂಡಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಜೈಶ್-ಉಲ್-ಹಿಂದ್ ಸಂಘಟನೆಯ ಸಂದೇಶಗಳು ರವಾನೆಯಾಗಿದೆ. ಟೆಲಿಗ್ರಾಂನಲ್ಲಿ ಚ್ಯಾಟ್ ನಡೆಸಿರುವುದು ರಿವೀಲ್ ಆಗಿದೆ.
ಇನ್ನು ಬ್ಲಾಸ್ಟ್‌ಗೆ ಸಂಬಂಧಪಟ್ಟಂತೆ ಇಂದು ಆರರಿಂದ ಏಳು ಮಂದಿ ಎನ್‌ಐಎ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದಾರೆ. ಈ ಮಧ್ಯೆ ವಿಶೇಷ ಪೊಲೀಸ್ ತನಿಖಾ ದಳ ಈ ರಸ್ತೆಯ ಸಿಸಿಟಿವಿಗಳನ್ನು ಪರಿಶೀಲಿಸಿದ್ದು, ಇಬ್ಬರು ಕಾರಿನಲ್ಲಿ ಬಂದಿಳಿಯುವ ದೃಶ್ಯ ಸೆರೆಯಾಗಿದೆ. ಅಲ್ಲದೇ ಭಾರತದ ಮೂಲದ ಕಾರು ಇದಾಗಿದ್ದು ಮೂವರ ಸ್ಕೇಚ್ ಬರೆಸಿ ಆರೋಪಿಗಳನ್ನು ಅರೆಸ್ಟ್ ಮಾಡಲು ಪೊಲೀಸರು ಮುಂದಾಗಿದ್ದಾರೆ. ಸಿಸಿ ಟಿವಿ ಮೂಲಕ ಆರೋಪಿಗಳ ಪತ್ತೆಯಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಇನ್ನು ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಇಸ್ರೇಲ್ ರಾಯಬಾರಿ ರಾನ್ ಮಾಲ್ಕಾ, ದಿಲ್ಲಿಯಲ್ಲಿ ಆಗಿರುವ ಸ್ಪೋಟ ನಮಗೆ ಆಶ್ಚರ್ಯ ತಂದಿಲ್ಲ ಯಾಕೆಂದರೆ ಜಗತ್ತಿನಾದ್ಯಂತ ಇರುವ ಇಸ್ರೇಲ್ ರಾಯಬಾರಿ ಕಚೇರಿಗಳನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎಂದು ತಿಳಿಸಿದರು. ಐಇಡಿ ಸ್ಪೋಟದ ಬಗ್ಗೆ ತನಿಖೆ ನಡೆಸಲು ಭಾರತಕ್ಕೆ ನಾವು ಎಲ್ಲ ರೀತಿಯಲ್ಲೂ ಸಹಕರಿಸುತ್ತೇವೆ ಎಂದು ತಿಳಿಸಿದ್ದಾರೆ.