Connect with us

KARNATAKA

3 ವರ್ಷದಿಂದ ಲವ್​-ಸೆಕ್ಸ್​-ಅಬಾರ್ಷನ್; ಲೆಕ್ಚರರ್​ ಮಗನ ಕಾಮಪುರಾಣ!

ಬೆಂಗಳೂರು, ಫೆಬ್ರವರಿ 04 : ವಿವಾಹವಾಗುವುದಾಗಿ ನಂಬಿಸಿ ಉಪನ್ಯಾಸಕಿ ಮಗ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿರುವ ಘಟನೆ ನಡೆದಿದೆ. ತಾನು ಓದುತ್ತಿದ್ದ ಕಾಲೇಜಿನ ಲೆಕ್ಚರರ್​ರೊಬ್ಬರ ಮಗನ ಪ್ರೇಮಪಾಶಕ್ಕೆ ಸಿಕ್ಕ ವಿದ್ಯಾರ್ಥಿನಿ, ಇದೀಗ ನ್ಯಾಯಕ್ಕಾಗಿ ವಿದ್ಯಾರಣ್ಯಪುರ ಪೊಲೀಸ್​ ಠಾಣೆ ಮೆಟ್ಟಿಲೇರಿದ್ದಾಳೆ.

ಸಂತ್ರಸ್ತ ಯುವತಿ ಕೊಟ್ಟ ದೂರಿನ ಮೇರೆಗೆ ಆರೋಪಿ ಚಂದನ್​ನನ್ನು ಪೊಲೀಸರು ಬಂಧಿಸಿದ್ದಾರೆ. ಚಂದನ್​ ತಾಯಿ ನಗರದ ಕಾಲೇಜೊಂದರ ಲೆಕ್ಚರರ್. ಆ ಯುವತಿಯೂ ಅದೇ ಕಾಲೇಜಿನ ವಿದ್ಯಾರ್ಥಿನಿ. ಲೆಕ್ಚರರ್​ನನ್ನು ನೋಡೋಕೆ ಎಂದು ವಿದ್ಯಾರ್ಥಿನಿ ಮನೆಗೆ ಬಂದ ವೇಳೆ ಚಂದನ್​ ಪರಿಚಯವಾಗಿತ್ತು. ಇವರಿಬ್ಬರ ನಡುವೆ ಸಲುಗೆ ಬೆಳೆದು ಪ್ರೀತಿಗೆ ತಿರುಗಿತ್ತು. ಮುಂದೆ ಏನೆಲ್ಲ ಅವಾಂತರ ಆಯ್ತು ಎಂಬುದುನ್ನು ಸಂತ್ರಸ್ತೆ ದೂರಿನಲ್ಲಿ ವಿವರಿಸಿದ್ದಾರೆ.

2018ರಲ್ಲಿ ಸಂತ್ರಸ್ತ ಯುವತಿ ಕಾಲೇಜುನಲ್ಲಿ ಓದುತ್ತಿರುವಾಗ ಆರೋಪಿ ಚಂದನ್​ನ ಪರಿಚಯವಾಗಿತ್ತು. ಸ್ನೇಹ ಪ್ರೇಮಕ್ಕೆ ತಿರುಗಿತ್ತು. ಈ ನಡುವೆ ಮದುವೆಯಾಗುವುದಾಗಿ ನಂಬಿಸಿದ್ದ ಚಂದನ್​, ಯುವತಿ ಜತೆ ಮೂವರು ವರ್ಷಗಳಿಂದ ಬಲವಂತವಾಗಿ ಲೈಂಗಿಕ ಸಂಪರ್ಕ ಹೊಂದಿದ್ದ.

ಎರಡು ಬಾರಿ ಗರ್ಭಿಣಿಯಾದರೂ ಬಲವಂತವಾಗಿ ಅಬಾರ್ಷನ್​ ಮಾಡಿಸಿದ್ದ. ಅಲ್ಲದೆ ಮದುವೆಗಾಗಿ 5-6ರಿಂದ ಲಕ್ಷ ಹಣವನ್ನೂ ಪಡೆದಿದ್ದ. ಇದೀಗ ಮದುವೆ ಆಗಲ್ಲ ಎಂದು ವಂಚಿಸಿದ್ದಾನೆ ಎಂದು ದೂರಿನಲ್ಲಿ ವಿವರಿಸಲಾಗಿದೆ. ಚಂದನ್ ವಿರುದ್ಧ ವಿದ್ಯಾರಣ್ಯಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗುತ್ತಿದ್ದಂತೆ ಆರೋಪಿಯನ್ನ ಪೊಲೀಸರು ಬಂಧಿಸಿದ್ದಾರೆ.