Connect with us

    DAKSHINA KANNADA

    ಅಪ್ರಾಪ್ತ ಬಾಲಕಿಯ ಬೆತ್ತಲೆ ಪೋಟೋ ಬಳಸಿ ಲವ್ ಜಿಹಾದ್ ಗೆ ಯತ್ನ – ಆರೋಪಿ ಸೆರೆ

    ಮಂಗಳೂರು ಜನವರಿ 21 : ಬೆಳ್ತಂಗಡಿಯಲ್ಲಿ ಖಾಸಗಿ ವಿಧ್ಯಾಸಂಸ್ಥೆಯೊಂದರಲ್ಲಿ ವ್ಯಾಸಂಗ ಮಾಡುತ್ತಿರುವ ಒಂಬತ್ತನೇ ತರಗತಿ ವಿಧ್ಯಾರ್ಥಿನಿಯ ಸ್ನೇಹ ಬೆಳಸಿ ಆಕೆಯನ್ನು ಲವ್ ಜಿಹಾದ್ ಗೆ ಯತ್ನಿಸಿದ ಪ್ರಕರಣ ಬೆಳಕಿಗೆ ಬಂದಿದ್ದು, ಆರೋಪಿ ವಿರುದ್ದ ಪೋಕ್ಸೋ ಪ್ರಕರಣ ದಾಖಲಾಗಿದೆ.


    ಕರಾವಳಿಯಲ್ಲಿ ಮತ್ತೆ ಲವ್ ಜಿಹಾದ್ ಸದ್ದು ಮಾಡಿದ್ದು, ಬೆಳ್ತಂಗಡಿಯಲ್ಲಿ ಕಲಿಯಲು ಬೆಂಗಳೂರಿನಿಂದ ಬಂದ ಅಪ್ರಾಪ್ತ ಬಾಲಕಿಯ ಸ್ನೇಹ ಸಂಪಾದಿಸಿ ಆಕೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಉಜಿರೆ TB ಕ್ರಾಸ್ ನಿವಾಸಿ ಮಹಮ್ಮದ್ ಅಮನ್ ಎಂಬಾತನನ್ನು ಬಂಧಿಸಿದ್ದಾರೆ.


    ಆರೋಪಿ ಮಹಮ್ಮದ್ ಅಮನ್ ಸ್ನೇಹಿತೆಯ ಮುಖಾಂತರ ಆಕೆಯ ಪಿಜಿಯಲ್ಲಿ ವಾಸವಿರುವ ಸಂತ್ರಸ್ತ ವಿದ್ಯಾರ್ಥಿನಿಯ ನಂಬರ್ ಪಡೆದು, ಸ್ನೇಹ ಬೆಳೆಸಿದ್ದಾನೆ. ನಂತರ ಅಪ್ರಾಪ್ತ ಬಾಲಕಿಯನ್ನು ಬೆದರಿಸಿ ಆಕೆಯ ಬೆತ್ತಲೆ ಫೋಟೋ ಪಡೆದು ನೀನು ನನ್ನ ಜೊತೆ ಬರಬೇಕು, ಇಲ್ಲವಾದರೆ ಫೋಟೊ ವೈರಲ್ ಮಾಡುವುದಾಗಿ ಬೆದರಿಸಿದ್ದಾನೆ.

    ಈತ ಆಕೆಗೆ ದಿನನಿತ್ಯ ವೀಡಿಯೊ ಕಾಲ್ ಮಾಡಿ ತೊಂದರೆ ಕೊಡುತ್ತಿದ್ದ ಎಂದು ತಿಳಿದು ಬಂದಿದ್ದು ಈ ಹಿನ್ನಲೆ ವಿದ್ಯಾರ್ಥಿನಿಯ ಪೋಷಕರು ಕೆಂಗೇರಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಇದೀಗ ಆರೋಪಿಯನ್ನು ಬೆಳ್ತಂಗಡಿಯ ಪೋಲೀಸ್ ಸರ್ಕಲ್ ಇನ್ಸ್‌ಪೆಕ್ಟರ್ ಸಂದೇಶ್ ಪಿಜಿ ಮತ್ತವರ ತಂಡ ಪತ್ತೆ ಹಚ್ಚಿ ಬೆಂಗಳೂರು ಪೋಲೀಸರ ವಶಕ್ಕೆ ನೀಡುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿ ವಿರುದ್ದ ಪೋಕ್ಸೋ ಪ್ರಕರಣ ದಾಖಲಿಸಲಾಗಿದೆ.

    ಉಜಿರೆಯಲ್ಲಿ ಇಂತಹ ಸುಮಾರು ಪ್ರಕರಣಗಳು ಆಗಾಗ ನಡೆಯುತ್ತಿದ್ದು ಇದಕ್ಕೆಲ್ಲ ಮೂಲ ಕಾರಣ ಅನಧಿಕೃತ ಹಾಸ್ಟೆಲ್ ಗಳು. ಉಜಿರೆಯ ಸುತ್ತಮುತ್ತ ಅನ್ಯಮತೀಯರು ಹಾಸ್ಟೆಲ್ ನಡೆಸುತ್ತ ಎಳೆಯ ಹೆಣ್ಣುಮಕ್ಕಳನ್ನು ಈ ರೀತಿಯಾಗಿ ಉಪಯೋಗಿಸುತ್ತಿರುವುದು ಆತಂಕಕಾರಿಯಾಗಿದೆ. ಇನ್ನಾದರೂ ಮಕ್ಕಳ ಪೋಷಕರು ಎಚ್ಚೆತ್ತುಕೊಂಡು ಇಂತಹ ಪ್ರಕರಣಗಳು ನಡೆಯದಂತೆ ಜಾಗ್ರತೆವಹಿಸಬೇಕು ಮತ್ತು ಇಂತಹ ಹಾಸ್ಟೆಲ್ ಗಳ ವಿರುದ್ದ ಇಲಾಖೆ ಕಾನೂನು ಕ್ರಮ ಕೈಗೊಳ್ಳಬೇಕು.

    Share Information
    Advertisement
    Click to comment

    Leave a Reply

    Your email address will not be published. Required fields are marked *