Connect with us

DAKSHINA KANNADA

ಜಲ್ಲಿ ಸಾಗಾಟದ ಲಾರಿ ಪಲ್ಟಿ- ಚಾಲಕ ಸ್ಥಳದಲ್ಲೇ ಸಾವು

ಬಂಟ್ವಾಳ, ನವೆಂಬರ್ 4: ಜಲ್ಲಿ ಸಾಗಾಟದ ಲಾರಿಯೊಂದು ಉರುಳಿಬಿದ್ದ ಪರಿಣಾಮ ಅದರ ಚಾಲಕ ಸ್ಥಳದಲ್ಲಿಯೇ ಮೃತಪಟ್ಟು ಕ್ಲೀನರ್ ಗಾಯಗೊಂಡಿರುವ ಘಟನೆ ತಾಲೂಕಿನ ಪುಣಚ ಬುಳೇರಿಕಟ್ಟೆ ರಸ್ತೆಯಲ್ಲಿ ಇಂದು ಸಂಭವಿಸಿದೆ.


ಪುಣಚ ಸಮೀಪದ ಕೋರೆಯೊಂದರಿಂದ ಜಲ್ಲಿ ಸಾಗಾಟ ಮಾಡುತ್ತಿದ್ದ ವೇಳೆ ಪುಣಚ ಗ್ರಾಮದ ಪಾಲತ್ತಡ್ಕ ಎಂಬಲ್ಲಿ ನಿಯಂತ್ರಣ ಕಳೆದ ಲಾರಿ ರಸ್ತೆಯಲ್ಲಿ ಪಲ್ಟಿಯಾಗಿದೆ. ಚಾಲಕ ಲಾರಿ ಅಡಿಯಲ್ಲಿ ಹಲವು ಸಮಯದವರೆಗೆ ಸಿಕ್ಕಿಹಾಕಿ ಮೃತಪಟ್ಟಿದ್ದಾರೆ. ಸ್ಥಳೀಯರ ಸಹಕಾರದಲ್ಲಿ ಮೃತದೇಹವನ್ನು ಹೊರ ತೆಗೆಯಲಾಗಿದೆ. ಕ್ಲೀನರ್ ಗೆ ಸಣ್ಣ ಪುಟ್ಟ ಗಾಯಗಳಾಗಿದೆ. ಸ್ಥಳಕ್ಕೆ ವಿಟ್ಲ ಪೊಲೀಸರು ಭೇಟಿ ನೀಡಿದ್ದಾರೆ.

Facebook Comments

comments