Connect with us

    LATEST NEWS

    ಲಾರಿ ದರ ಪರಿಷ್ಕರಣೆ: ಅಕ್ಟೋಬರ್ 3ರೊಳಗೆ ಒಮ್ಮತಕ್ಕೆ ಬರಲು ಡಿಸಿ ಸಲಹೆ

    ಮಂಗಳೂರು ಸೆಪ್ಟೆಂಬರ್ 29:- ಜೆ ಎಸ್ ಡಬ್ಲ್ಯೂ – ಮಂಗಳೂರು ಕೋಲ್ ಟರ್ಮಿನಲ್ ಕಲ್ಲಿದ್ದಲು ಸಾಗಾಟ ಹಾಗೂ ನಿರ್ವಹಣೆ, ಮಂಗಳೂರು ಬಂದರಿಗೆ ಬರುವ ಎಲ್ಲಾ ಆಮದು ಮತ್ತು ರಫ್ತು ಸರಕುಗಳನ್ನು ನಿರ್ವಹಿಸುವ, ಮಾರಾಟ ಮಾಡುವ ಕಂಪನಿಗಳು, ಎಂ.ಆರ್.ಪಿ.ಎಲ್ ಎಲ್ಲಾ ಘಟಕಗಳು, ಉಪ ಘಟಕಗಳು, ಅಲ್ಲದೆ ಕಾರ್ಯನಿರ್ವಹಿಸುವ ಸಿಮೆಂಟ್, ಕಬ್ಬಿಣ ಮೊದಲಾದ ಎಲ್ಲಾ ರೀತಿಯ ಉತ್ಪನ್ನಗಳ ಸಾಗಾಟ ಮಾಡುವ ಟ್ರಾನ್ಸ್ಪೋರ್ಟ್ ಕಾಂಟ್ರಾಕ್ಟರ್ಸ್, ದಕ್ಷಿಣ ಕನ್ನಡ ಲಾರಿ ಮಾಲೀಕರ ಸಂಘದವರು, ಪೊಲೀಸ್ ಹಾಗೂ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಹಾಗೂ ಸಂಬಂಧಿಸಿದ ಇತರರು ಜಿಲ್ಲೆಯಲ್ಲಿ ಸರಕು ಸಾಗಾಣಿಕೆ ಮಾಡುವ 6 ರಿಂದ 16 ಚಕ್ರದ ಲಾರಿಗಳಿಗೆ ಕಿ.ಮೀ ಲೆಕ್ಕದಲ್ಲಿ ಪರಿಷ್ಕೃತ ಬಾಡಿಗೆ ದರ ನಿಗದಿಪಡಿಸುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ. ಅವರ ಅಧ್ಯಕ್ಷತೆಯಲ್ಲಿ ನಗರದ ಜಿಲ್ಲಾಧಿಕಾರಿಯವರ ಕಚೇರಿಯಲ್ಲಿ ಸಭೆ ನಡೆಯಿತು.


    ಮಂಗಳೂರಿನಿಂದ ಸರಕು ಹೊತ್ತು ಸಾಕಷ್ಟು ಲಾರಿಗಳು ರಾಜ್ಯಾದ್ಯಂತ ಸಾಗುತ್ತವೆ. ಅದರಲ್ಲೂ ಮುಖ್ಯವಾಗಿ ಕೊಪ್ಪಳ ಹಾಗೂ ಬಳ್ಳಾರಿಗೆ ಸಾಗುವ 6 ರಿಂದ 16 ಚಕ್ರದ ಲಾರಿಗಳ ಪ್ರತಿ ಟ್ರಿಪ್ ಗೆ 31,500 ರೂ.ಗಳು ಸಾಗಾಟ ದರವಾಗಿ ನಿಗದಿಯಾಗಿದೆ, ಈ ದರದಿಂದ ಲಾರಿ ಹಾಗೂ ಸಂಬಂಧಿತ ನಿರ್ವಹಣೆ ಇಂದಿನ ದಿನಗಳಲ್ಲಿ ಕಷ್ಟವಾಗಿದೆ, ಆದ ಕಾರಣ ಸರಕು ಸಾಗಾಣಿಕೆಗೆ ಪ್ರತಿ ಟನ್ ಗೆ 1,050 ರೂಪಾಯಿಗಳಿಂದ 1,200 ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತಕ್ಕೆ ಪರಿಷ್ಕರಿಸಲು ಜಿಲ್ಲಾ ಟ್ರಕ್ ಟ್ರಾನ್ಸ್ಪೋರ್ಟ್ ಕಾಂಟ್ರಾಕ್ಟರ್ ಗಳು ಸಂಬಂಧಿಸಿದವರೊಂದಿಗೆ ಕುಲಂಕುಶವಾಗಿ ಚರ್ಚೆ ನಡೆಸಿ ಅಕ್ಟೋಬರ್ 3ರೊಳಗೆ ದರ ಪರಿಷ್ಕರಣೆ ಕುರಿತಂತೆ ಒಮ್ಮತಕ್ಕೆ ಬರುವಂತೆ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರು ಸಲಹೆ ನೀಡಿದರು.


    ಈ ಬೆಲೆ ಏರಿಕೆಗಾಗಿ ಟ್ರಕ್ ಮಾಲೀಕರು ಟ್ರಕ್ ಗಳ ಬಂದ್ ನಡೆಸಲು ಉದ್ದೇಶಿಸಿದ್ದರು, ಆದರೆ ದರ ಪರಿಷ್ಕರಣೆ ಕುರಿತಂತೆ ಜಿಲ್ಲಾಡಳಿತ ಸಂಬಂಧಿಸಿದರೊಂದಿಗೆ ಮಾತುಕತೆ ನಡೆಸಿ ಅಗತ್ಯ ಕ್ರಮ ವಹಿಸುವ ಮನವಿಗೆ ಸ್ಪಂದಿಸಿದ ಲಾರಿ ಮಾಲೀಕರ ಸಂಘದವರು ಕೂಡ ಬೆಲೆ ಪರಿಷ್ಕರಣೆಗೆ ಸಂಬಂಧಿಸಿದಂತೆ ಸಹಮತಕ್ಕೆ ಬರುವಂತೆ ಮನವಿ ಮಾಡಿದರು. ಬೆಲೆ ಪರಿಷ್ಕರಣೆಗೆ ಸಂಬಂಧಿಸಿದಂತೆ ಅಕ್ಟೋಬರ್ 3ರೊಳಗೆ ಟ್ರಾನ್ಸ್ಪೋರ್ಟ್ ಕಾಂಟಾಕ್ಟ್ರುಗಳು ಹಾಗೂ ಸಂಬಂಧಿಸಿದವರು ಮಾಹಿತಿ ನೀಡಬೇಕು, ನಂತರದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.

    Share Information
    Advertisement
    Click to comment

    You must be logged in to post a comment Login

    Leave a Reply