Connect with us

    DAKSHINA KANNADA

    “ಹಿಂದೂ ಸಮಾಜವನ್ನು ಕೆಣಕುವ ಮುನ್ನ ಇತಿಹಾಸವನ್ನು ತಿರುಗಿನೋಡಿ”;ದಯಾನಂದ ಶೆಟ್ಟಿ ಉಜಿರೆಮಾರು

    ಪುತ್ತೂರು : ಹಿಂದೂ ಸಮಾಜವನ್ನು ಕೆಣಕುವ ಮುನ್ನ ಇತಿಹಾಸವನ್ನು ತಿರುಗಿನೋಡಿ  ಎಂದು ಭಾರತೀಯ ಜನತಾ ಪಾರ್ಟಿ ಪುತ್ತೂರು ಗ್ರಾಮಾಂತರ ಮಂಡಲದ ಅಧ್ಯಕ್ಷರಾದ ದಯಾನಂದ ಶೆಟ್ಟಿ ಉಜಿರೆಮಾರು ಎಚ್ಚರಿಕೆ ನೀಡಿದ್ದಾರೆ.

     

    ಈ ಬಗ್ಗೆ ಪತ್ರಿಕಾ ಪ್ರಕಟನೆ ನೀಡಿದ ಅವರು ಹಿಂದೂ ನಾಯಕ ಶರಣ್ ಪಂಪುವೆಲ್ ರವರಿಗೆ ಸಾಮಾಜಿಕ ಜಾಲತಾಣದ ಮೂಲಕ ಬಹಿರಂಗ ಸವಾಲು ಹಾಕಿದ ಬಂಟ್ವಾಳ ಪುರಸಭೆಯ ಮಾಜಿ ಅಧ್ಯಕ್ಷ ಮಹಮ್ಮದ್ ಷರೀಫ್ ಅವರ ನಡೆಯನ್ನು ಖಂಡಿಸಿ ಪತ್ರಿಕಾ ಹೇಳಿಕೆ ನೀಡಿದ ಅವರು ಹಿಂದೂ ಸಮಾಜ ಮೌನವಾಗಿದೆ , ಎದ್ದು ನಿಲ್ಲಲ್ಲ ಎಂದು ಭಾವಿಸಿ ಈ ರೀತಿ ನಾಲಿಗೆ ಹರಿಬಿಟ್ಟು ಹಿಂದೂ ಸಮಾಜಕ್ಕೆ ಸವಾಲು ಹಾಕಿದ್ರೆ ಅದೂ ನಿಮ್ಮ ಮೂರ್ಖತನ. ಹಿಂದೂ ಸಮಾಜ ತಾಳ್ಮೆ ಕಳೆದುಕೊಂಡು ಕ್ರಿಯೆಗೆ ಪ್ರತಿಕ್ರಿಯೆ ನೀಡಲು ಹೊರಟರೆ ಏನಾಗಬಹುದೂ ಎಂದೂ ಕರಾವಳಿಯ ಇತಿಹಾಸವನ್ನು ತಿರುಗಿ ನೋಡಿಕೊಂಡರೆ ಒಳಿತು ಎಂದಿದ್ದಾರೆ. ಮತೀಯವಾದಿ ದೇಶದ್ರೋಹಿ ಸಂಘಟನೆಗಳ ಬೆಂಬಲದಿಂದ ಜನಪ್ರತಿನಿಧಿಯಾಗಿ ಇದ್ದುಕೊಂಡು ದೇಶದ್ರೋಹಿ ಸಂಘಟನೆಗಳ ಋಣ ಸಂದಾಯ ಮಾಡಲು ಈ ರೀತಿ ಸಮಾಜದ ಸ್ವಾಸ್ಥ್ಯವನ್ನು ಕೆಡಿಸುವ ಮಟ್ಟಿಗೆ ಹೇಳಿಕೆಗಳನ್ನು ನೀಡುವುದು ಅಕ್ಷಮ್ಯ ಅಪರಾಧ. ಪೋಲಿಸ್ ಇಲಾಖೆ ಇಂಥವರ ಹಾಗೂ ಇವರನ್ನು ಪ್ರೇರೆಪಿಸುವವರ ವಿರುದ್ಧ ಅಗತ್ಯ ಕಾನೂನು ರೀತಿಯ ಕ್ರಮವನ್ನು ಜರುಗಿಸಿ ಇಂತವರಿಂದ ಸಮಾಜವನ್ನು ರಕ್ಷಿಸಬೇಕು. ಎಂದು ದಯಾನಂದ ಶೆಟ್ಟಿ ಉಜಿರೆಮಾರು ತಿಳಿಸಿದರು.

     

    Share Information
    Advertisement
    Click to comment

    You must be logged in to post a comment Login

    Leave a Reply