Connect with us

    LATEST NEWS

    ಲೋಕಾಯುಕ್ತ ಬಲೆಗೆ ಬಿದ್ದ ಉಪ್ಪೂರು ಗ್ರಾಮ ಪಂಚಾಯತ್ ಪಿಡಿಓ ಹಾಗೂ ಬಿಲ್ ಕಲೆಕ್ಟರ್‌

    ಉಡುಪಿ ಮೇ 30: ಲಂಚ ಸ್ವೀಕರಿಸುತ್ತಿದ್ದ ಉಪ್ಪೂರು ಗ್ರಾಮ ಪಂಚಾಯತ್ ಪಿಡಿಓ ಹಾಗೂ ಬಿಲ್ ಕಲೆಕ್ಟರ್‌ನನ್ನು ಉಡುಪಿ ಲೋಕಾಯುಕ್ತ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಬಂಧಿತರನ್ನು ಉಪ್ಪೂರು ಗ್ರಾಪಂ ಪಿಡಿಓ ಇನಾಯತುಲ್ಲಾ ಬೇಗ್ ಹಾಗೂ‌ ಬಿಲ್ ಕಲೆಕ್ಟರ್ ಸಂಜಯ್ ಎಂದು ಗುರುತಿಸಲಾಗಿದೆ. ಇವರು ರವಿ ಡಿಲಿಮಾ ಎಂಬವರಲ್ಲಿ ‌9/11 ಕೆಲಸಕ್ಕಾಗಿ 13,300ರೂಪಾಯಿ ಲಂಚದ ಬೇಡಿಕೆಯೊಡ್ಡಿದ್ದರು.


    ರವಿ ಈ ಬಗ್ಗೆ ಉಡುಪಿ ಲೋಕಾಯುಕ್ತರಿಗೆ ದೂರು ನೀಡಿದ್ದರು. ಅದರಂತೆ ಲೋಕಾಯುಕ್ತ ಪೊಲೀಸರು ಪ್ರಕರಣದ ದಾಖಲಿಸಿಕೊಂಡಿದ್ದರು. ಈ ಸಂಬಂಧ ರವಿ ಡಿಲಿಮಾ ಅವರಿಂದ 13,300ರೂ. ಲಂಚ ಸ್ವೀಕರಿಸುತ್ತಿದ್ದ ಪಿಡಿಓ ಇನಾಯತ್ ಉಲ್ಲಾ ಬೇಗ್ ಹಾಗೂ‌ ಸಂಜಯ್ ಅವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.

    Share Information
    Advertisement
    Click to comment

    Leave a Reply

    Your email address will not be published. Required fields are marked *