Connect with us

LATEST NEWS

ಕಬಾಬ್‌ ತಿನ್ನಲು ಹೋಗಿ ಬರೋಬ್ಬರಿ 1 ಲಕ್ಷ ರೂ. ದಂಡ!

ಮೆಲ್ಬೋರ್ನ್‌: ಪ್ರಪಂಚದಲ್ಲಿ ಎಂತೆಂಥ ಕ್ರೇಜಿ ಜನರಿದ್ದಾರೆ ಎಂದರೆ ಲಾಕ್‌ಡೌನ್‌ ಸಮಯದಲ್ಲಿ ಕಬಾಬ್‌ ತಿನ್ನೋಕಂತಾನೇ ಯುವತಿಯೊರ್ವಳು 75 ಕಿಮೀ ದೂರ ಕ್ರಮಿಸಿದ್ದಾಳೆ. ಈ ಅಂತರದ ನಡುವೆ ಪೊಲೀಸರಿಗೆ ಸಿಕ್ಕಿಬಿದ್ದು ಲಾಕ್‌ಡೌನ್‌ ಉಲ್ಲಂಘನೆಗೆ ಒಂದು ಲಕ್ಷ ರೂ. ದಂಡ ಕೂಡ ಕಟ್ಟಿದ್ದಾಳೆ. ಈ ಘಟನೆಯೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಯಾಗುತ್ತಿದೆ.

ಹೌದು, ಆಸ್ಟ್ರೇಲಿಯಾದಲ್ಲಿ ಈ ಘಟನೆ ನಡೆದಿದ್ದು, ಕಾಂಗರೋ ನಾಡಿನಲ್ಲಿ ಈಗ ನಾಲ್ಕನೇ ಹಂತದ ಲಾಕ್‌ಡೌನ್ ಜಾರಿಯಲ್ಲಿದೆ. ಹೀಗಿರುವಾಗ ಯುವತಿಯೋರ್ವಳು ಕಬಾಬ್‌ ತಿನ್ನಲು ಲಾಕ್ಡೌನ್ ನಿಯಮ ಉಲ್ಲಂಘಿಸಿ ಸುಮಾರು 75 ಕಿಮೀ ದೂರ ಕಾರ್ ಡ್ರೈವ್ ಮಾಡಿಕೊಂಡು ಹೋಗಿದ್ದಾಳೆ. ಕಬಾಬ್ ತಿಂದು ವಾಪಸ್ ಬರುವಾಗ ಪೊಲೀಸರು ಯುವತಿಯ ಕಾರು ಅಡ್ಡಗಟ್ಟಿ ಬರೋಬ್ಬರಿ ಒಂದು ಲಕ್ಷ ರೂ. ದಂಡ ಹಾಕಿದ್ದಾರೆ.

ಸೆಪ್ಟೆಂಬರ್‌ 7ರಂದು ನೈರುತ್ಯ ಮೆಲ್ಬೋರ್ನ್‌ನಲ್ಲಿ ಕರ್ಫ್ಯೂ ಜಾರಿಯಲ್ಲಿದ್ದಾಗ ಘಟನೆ ನಡೆದಿದೆ. ನಾನು ಇಲ್ಲಿನ ಗೀಲಾಂಗ್‌ ಏರಿಯಾದವಳು. ಕಬಾಬ್‌ ತಿನ್ನಲು ಮೆಲ್ಬೋರ್ನ್‌ನತ್ತ ಸಾಗುತ್ತಿದ್ದೆ. ಹೀಗೆ ಸಾಗುತ್ತಾ ನನ್ನ ಬಾಯ್ ಫ್ರೆಂಡ್ ಮನೆ ಇರುವ ವೆರ‍್ರಿಬೀ ಪ್ರದೇಶಕ್ಕೆ ಬಂದೆ. ಕಬಾಬ್ ತಿಂದು ಬಾಯ್ ಫ್ರೆಂಡ್ ಭೇಟಿಯಾಗಿ ಹೋಗುತ್ತಿರುವುದಾಗಿ ಪೊಲೀಸರ ಬಳಿ ಯುವತಿ ಹೇಳಿಕೊಂಡಿದ್ದಾಳೆ.

ಹೀಗಾಗಿ, ಆಸ್ಟ್ರೇಲಿಯಾ ಪೊಲೀಸರು ಲಾಕ್ಡೌನ್ ಉಲ್ಲಂಘಿಸಿದ್ದಕ್ಕಾಗಿ ಯುವತಿಗೆ 1652 ಡಾಲರ್‌ ದಂಡ ವಿಧಿಸಿದ್ದಾರೆ. ಅಂದರೆ, ಯುವತಿ ಕಬಾಬ್ ತಿನ್ನುವುದಕ್ಕಾಗಿ ಒಂದು ಲಕ್ಷ ರೂ. ಫೈನ್ ಕಟ್ಟುವಂತಾಗಿದೆ. 171 ಜನ ಕರ್ಫ್ಯೂ ಉಲ್ಲಂಘಿಸಿದ್ದಾರೆ ಎಂದು ವಿಕ್ಟೋರಿಯಾ ಪೊಲೀಸರು ತಿಳಿಸಿದ್ದಾರೆ.

Facebook Comments

comments