Connect with us

    KARNATAKA

    ಲಾಕ್‌ಡೌನ್‌ ವಿಸ್ತರಣೆ ಜೂ.7 ರವರೆಗೆ : ಸಿಎಂ ಘೋಷಣೆ

    ಬೆಂಗಳೂರು, ಮೇ 21 : ಗ್ರಾಮೀಣ ಭಾಗದಲ್ಲಿ ಹೆಚ್ಚುತ್ತಿರುವ ಕೊರೊನಾ ಮಹಾಮಾರಿಯನ್ನು ಕಟ್ಟಿಹಾಕುವ ನಿಟ್ಟಿನಲ್ಲಿ ಲಾಕ್ ಡೌನ್ ಅವಧಿಯನ್ನು ಎರಡು ವಾರ ( ಜೂನ್ 7 ರವರೆಗೆ) ಗಳ ಕಾಲ ವಿಸ್ತರಿಸಲಾಗಿದೆ. ಇದರಿಂದಾಗಿ ಜೂನ್ 7 ರ ವರೆಗೆ ಕರುನಾಡು ಸಂಪೂರ್ಣ ಸ್ತಬ್ದವಾಗಲಿದ್ದು, ಹಾಲಿ ಇರುವ ಮಾಗ9ಸೂಚಿಯೇ ಮುಂದುವರೆಯಲಿದೆ.

    ತಮ್ಮ ಅಧಿಕೃತ ಕಾವೇರಿ ನಿವಾಸದಲ್ಲಿ ಹಿರಿಯ ಸಚಿವರ ಜೊತೆ ಚರ್ಚೆ ನಡೆಸಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮತ್ತೆ ಎರಡು ವಾರಗಳ ಕಾಲ ಲಾಕ್ ಡೌನ್ ಅವಧಿ ವಿಸ್ತರಣೆ ಮಾಡುವ ನಿ‌ರ್ಧಾರವನ್ನು ಪ್ರಕಟಿಸಿದರು. ಹಿರಿಯ ಸಚಿವರು ಹಾಗೂ ಅಧಿಕಾರಿಗಳ ಜೊತೆ ಚರ್ಚಿಸಲಾಗಿದೆ.ಲಾಕ್‌ಡೌನ್ ವಿಚಾರದಲ್ಲಿ ಕೆಲ ನಿರ್ಧಾರ ಮಾಡಿದ್ದೇವೆ.ರಾಜ್ಯದ ಹಿತದೃಷ್ಟಿಯಿಂದ ಈ ನಿರ್ಧಾರ ಮಾಡಿದ್ದೇವೆ ಎಂದು ಸರಕಾರದ ತೀಮಾನವನ್ನು ಸಮರ್ತಿಸಿ ಕೊಂಡರು.

    ಕೋವಿಡ್ ಹಳ್ಳಿಗಳಿಗೆ ಹೆಚ್ಚಾಗಿದೆ. ಹೀಗಾಗಿ ಕೋವಿಡ್ ನಿಯಂತ್ರಣಕ್ಕೆ ಕೆಲವು ತೀರ್ಮಾನ ಮಾಡಲಾಗಿದೆ.ಜನರು ಈ ಕಠಿಣ ನಿರ್ಬಂಧ ಪಾಲಿಸಬೇಕು ಎಂದು ಮನವಿ ಮಾಡಿದರು. ಕಠಿಣ ನಿರ್ಬಂಧ ಹೇರಿಕೆ ಹಿನ್ನೆಲೆಯಲ್ಲಿ ಕೋವಿಡ್ ನಿಯಂತ್ರಣಕ್ಕೆ ಬಂದಿದೆ.ಮುಂದಿನ 14 ದಿನಗಳ‌ಕಾಲ ( ಜೂನ್ 7ರವರೆಗೆ )ವಿಸ್ತರಣೆ ಮಾಡಲಾಗಿದೆ.ಜನರು ಎಂದಿನಂತೆ ಸಹಕಾರ ಕೊಡಬೇಕು. ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಹಾಗೂ ಕೋವಿಡ್ ನಿಯಮಗಳನ್ನು ಪಾಲಿಸಬೇಕು ಎಂದು ಯಡಿಯೂರಪ್ಪ ಅವರು ಕೋರಿದರು.

    ಹೀಗಿರುವ ಮಾರ್ಗಸೂಚಿ ನಿಯಮಗಳೇ ಮುಂದುವರಿಯಲಿವೆ. ಬೆಳಗ್ಗೆ 10 ಒಳಗೆ ಮನೆ ಸೇರಬೇಕು.ಇಲ್ಲವಾದರೆ ಕಠಿಣ ಕ್ರಮ‌ ತೆಗೆದುಕೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದರು. ಅಗತ್ಯ ಸೇವೆಯ ವಸ್ತುಗಳನ್ನು ಖರೀದಿಸಲು ಯಾವುದೇ ನಿಬಂಧನೆಗಳು ಇರುವುದಿಲ್ಲ. ಆದರೆ ಜನರು ಅನಗತ್ಯವಾಗಿ ಹೊರಗೆ ಓಡಾಡಬಾರದು. ವಿಶೇಷವಾಗಿ ರಾಜಧಾನಿ ಬೆಂಗಳೂರು, ಹಾಗೂ ಅಕ್ಕಪಕ್ಕದ ಜಿಲ್ಲೆಗಳಲ್ಲಿ ಕಡಿವಾಣ ಹಾಕಿಕೊಳ್ಳಬೇಕಾದ ಅಗತ್ಯವಿದೆ ಎಂದು ಹೇಳಿದರು.

    ಸುಖಾಸುಮ್ಮನೆ ತಿರುಗಾಟ ನಡೆಸಿದರೆ ಅಂತಹವರ ಮೇಲೆ ಕ್ತಮ ಜರುಗಿಸಲು ಪೊಲೀಸರಿಗೆ ಸೂಚನೆ ‌ಕೊಡಲಾಗುವುದು. ಇದಕ್ಕೆ ಜನರು ಅವಕಾಶ ನೀಡಬಾರದೆಂದು ಮನವಿ ಮಾಡಿದರು.

    Share Information
    Advertisement
    Click to comment

    Leave a Reply

    Your email address will not be published. Required fields are marked *