Connect with us

    LATEST NEWS

    ಅಪಘಾತದಲ್ಲಿ ಮೃತಪಟ್ಟ ತನ್ನ ಪುಟ್ಟ ಕಂದಮ್ಮನ ಅಂಗಾಂಗ ದಾನ ಮಾಡಿದ ತಂದೆ….!!

    ಚಂಢಿಗಡ್ : ಅಪಘಾತದಲ್ಲಿ ತನ್ನ ಕುಟುಂಬದ 7 ಮಂದಿಯನ್ನು ಕಳೆದುಕೊಂಡ ತಂದೆಯೊಬ್ಬ ಕೊನೆಗೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಸಾವಿನಂಚಿನಲ್ಲಿದ್ದ ತನ್ನ ಎರಡೂವರೆ ವರ್ಷದ ಮಗಳ ಅಂಗಾಂಗವನ್ನು ದಾನ ಮಾಡಿ 9 ಜನರಿಗೆ ಜೀವನವನ್ನು ಕೊಟ್ಟ ಘಟನೆ ನಡೆದಿದ್ದು, ನೋವಿನಲ್ಲೂ ಸಾರ್ಥಕತೆ ಮೆರೆದ ಬಾಲಕಿಯ ತಂದೆ ಗ್ರೇಟ್.


    ಬೆಂಗಳೂರು ಮೂಲದ ಉದ್ಯಮಿ ಅಮಿತ್ ಗುಪ್ತಾ ಮತ್ತು ಕೀರ್ತಿ ಗುಪ್ತಾ ದಂಪತಿಯ ಪುತ್ರಿ ಅನಿಕಾ. ಈ ದಂಪತಿಗೆ 6 ವರ್ಷದ ಮಗ ಕೂಡ ಇದ್ದು. ಡಿಸೆಂಬರ್ 12ರಂದು ಚಂಡಿಗಢದ ಮೊಹಾಲಿಯಲ್ಲಿ ಸಂಭವಿಸಿದ ಭೀಕರ ಅಪಘಾ ತದಲ್ಲಿ ಕೀರ್ತಿ ಗುಪ್ತಾ ಮತ್ತು ಇವರ ಮಗ ನುವಂಶ್ ಸೇರಿ ಕುಟುಂಬದ 6 ಮಂದಿ ದುರಂತ ಅಂತ್ಯ ಕಂಡಿದ್ದರು. ಈ ಅಪಘಾತದಲ್ಲಿ ಗಂಭೀರ ಗಾಯಗೊಂಡು ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ ಬಾಲಕಿ ಅನಿಕಾಳನ್ನು ಚಂಡೀಗಢ ಪಿಜಿಐ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಆದರೆ ಗಂಭೀರವಾಗಿ ಗಾಯಗೊಂಡಿದ್ದ ಅನಿಕಾ ಮಾತ್ರ ಬದುಕುಳಿಯುವ ಸಾಧ್ಯತೆ ತೀರಾ ಕಡಿಮೆ ಇತ್ತು ಎಂದು ವೈದ್ಯರು ಹೇಳಿದ್ದರು.


    ಡಿಸೆಂಬರ್ 22ರಂದು ಬಾಲಕಿ ಅನಿಕಾಳ ಮಿದುಳು ನಿಷ್ಕ್ರಯಗೊಂಡಿತ್ತು. ಇನ್ನು ಮಗಳು ಅನಿಕಾ ಬದುಕುವ ಅವಕಾಶ ಇಲ್ಲ ಎಂದು ಗೊತ್ತಾಗುತ್ತಿದ್ದಂತೆ ಬಾಲಕಿಯ ತಂದೆ ತನ್ನ ಪುಟ್ಟ ಮಗಳ ಅಂಗಾಂಗ ದಾನಕ್ಕೆ ನಿರ್ಧರಿಸಿದ್ದರು. ಕಿಡ್ನಿ, ಲಿವರ್, ಕಾರ್ನಿಯಾವನ್ನು ದಾನ ಮಾಡಿದ್ದಾರೆ. ಅನಿಕಾಳ ಅಂಗಾಂಗಗಳನ್ನು 9 ಜನರಿಗೆ ಅಳವಡಿಸಲಾಗಿದ್ದು, ಆ ಮೂಲಕ 9 ಜನರಿಗೆ ಬದುಕು ಸಿಕ್ಕಂ ತಾಗಿದೆ.

    Share Information
    Advertisement
    Click to comment

    Leave a Reply

    Your email address will not be published. Required fields are marked *