DAKSHINA KANNADA
ಯಕ್ಷಗಾನಕ್ಕೂ ಬಂತು ‘ ಲಿಪ್ ಲಾಕ್ ‘! ? ವೈರಲ್ ಆದ ವಿಡಿಯೋ
ಯಕ್ಷಗಾನಕ್ಕೂ ಬಂತು ‘ ಲಿಪ್ ಲಾಕ್ ‘! ? ವೈರಲ್ ಆದ ವಿಡಿಯೋ
ಮಂಗಳೂರು ಸೆಪ್ಟೆಂಬರ್ 21: ಯಕ್ಷಗಾನ ಸಿನಿಮಾದಂತೆ ಕೇವಲ ಮನರಂಜನಾ ವಸ್ತುವಲ್ಲ. ಯಕ್ಷಗಾನ ಒಂದು ಆರಾಧನಾ ಸೇವೆ ಅಥವಾ ದೇವರನ್ನು ಒಲಿಸುದಕ್ಕಾಗಿ ನಡೆಸುವ ಒಂದು ಪೂಜೆ. ಇದೇ ಕಾರಣಕ್ಕಾಗಿ ಅಷ್ಟಾವಧಾನ ಸೇವೆಯಲ್ಲಿ ಯಕ್ಷಗಾನದ ಬಳಕೆ ಇರುವಂತಹದ್ದು.
ಕಳೆದ ಹತ್ತಾರು ಶತಮಾನಗಳಿಂದ ಇಂದಿನ ವರೆಗೂ ಕಟೀಲು, ಧರ್ಮಸ್ಥಳ ಮೊದಲಾದ ಮೇಳಗಳು ಹರಕೆಯ ರೂಪದಲ್ಲಿಯೇ ಯಕ್ಷಗಾನವನ್ನು ಆಡಿಕೊಂಡು ಬಂದಿದ್ದಾರೆ. ಆದರೆ, ಕಾಲಮಿತಿಯ ಭರಾಟೆಗೆ ಸಿಕ್ಕಿ ಯಕ್ಷಗಾನ ತನ್ನ ನೈಜತೆಯನ್ನು ಕಳೆದುಕೊಂಡಿದೆಯೇ ಎಂದರೆ ಅದೂ ಇಲ್ಲ, ಆದರೆ, ಆಧುನಿಕತೆಗನುಗುಣವಾಗಿ ಹಾಡುಗಾರಿಕೆಯ ಶೈಲಿ, ಕುಣಿತದ ನಡೆಗಳು ಬದಲಾವಣೆ ಯಾಗಿದೆ.
ಆದರೆ, ಇಷ್ಟರ ವರೆಗೆ ಅಶ್ಲೀಲತೆ ಯಕ್ಷಗಾನದ ರಂಗದಲ್ಲಿ ಕಾಣುತ್ತಿರಲಿಲ್ಲ, ಇಂದು ಅವೆಲ್ಲವನ್ನೂ ಮೀರಿ ಒಂದು ಹೆಜ್ಜೆ ಮುಂದುವರಿದಿರುವುದು ಯಕ್ಷಗಾನದ ಪಾವಿತ್ರ್ಯತೆಗೆ ಧಕ್ಕೆ ತರುವಲ್ಲಿವರೆಗೆ ಬಂದು ನಿಂತಿದೆ. ಕಳೆದ ಕೆಲ ದಿನದ ಹಿಂದೆ ನಡೆದ ಯಕ್ಷಗಾನ ಒಂದರ ಶೃಂಗಾರ ಸನ್ನಿವೇಶದಲ್ಲಿ ಸಿನಿಮಿ ಶೈಲಿಯ ” ಲಿಪ್ ಲಾಕ್ ” ಪ್ರೇಕ್ಷಕರಿಗೆ ತೀರ್ವ ಮುಜುಗರ ಉಂಟು ಮಾಡಿದ್ದಲ್ಲದೆ, ಇದೀಗ ಆ ವಿಡಿಯೋ ವೈರಲ್ ಆಗಿದೆ.
ಅದೂ ಕೂಡ ಸಂಪ್ರದಾಯವಾದಿ ಕಟೀಲು ಮೇಳದ ಹಿರಿಯ ಕಲಾವಿದರೇ ಈ ವರ್ತನೆ ನಡೆಸಿದ್ದ ವಿಷಾಧನೀಯ. ಅಲ್ಲದೇ ಅದರಲ್ಲಿ ಒಬ್ಬ ಕಲಾವಿದ ಸ್ವತಃ ಯಕ್ಷ ಗುರು. ಹತ್ತಾರು ಮಕ್ಕಳಿಗೆ ಯಕ್ಷಗಾನ ತರಬೇತಿ ನೀಡಬೇಕಾದ ವ್ಯಕ್ತಿಯೇ ಇಂತಹ ವರ್ತನೆ / ಅಭಿನಯ ರಂಗದಲ್ಲಿ ಮಾಡುವುದು ಎಷ್ಟು ಸರಿ? ಇದು ಸಮಾಜಕ್ಕೆ ಏನು ಸಂದೇಶ ನೀಡುತ್ತದೆ ಎಂಬುದು ಯಕ್ಷಾಭಿಮಾನಿಗಳ ವಾದ.