Connect with us

  DAKSHINA KANNADA

  ಮಂಗಳೂರು ದಸರಾ ಉತ್ಸವಕ್ಕೆ ಚಾಲನೆ

  ಮಂಗಳೂರು ದಸರಾ ಉತ್ಸವಕ್ಕೆ ಚಾಲನೆ

  ಮಂಗಳೂರು ಸೆಪ್ಟೆಂಬರ್ 21: ಕರಾವಳಿ ನಗರಿ ಮಂಗಳೂರಿನಲ್ಲೂ ವೈಭವದ ನವರಾತ್ರಿ ಉತ್ಸವಕ್ಕೆ ಚಾಲನೆ ದೊರೆತಿದೆ. ನಗರದ ಕುದ್ರೋಳಿ ಗೋಕರ್ಣನಾಧೇಶ್ವರ ಕ್ಷೇತ್ರದಲ್ಲಿ ಶಕ್ತಿಯ ಪ್ರತೀಕವಾದ ನವದುರ್ಗೆಯರ ಪ್ರತಿಷ್ಟಾಪನೆಯ ಮೂಲಕ ನವರಾತ್ರಿ ಉತ್ಸವಕ್ಕೆ ಚಾಲನೆ ದೊರೆತಿದೆ. ಶ್ರೀಕ್ಷೇತ್ರ ಕುದ್ರೋಳಿ ಗೋಕರ್ಣನಾಥ ದೇವಾಲಯದಲ್ಲಿ ದಸರಾ ಉತ್ಸವಕ್ಕೆ ಮಂಗಳೂರು ಪೊಲೀಸ್ ಆಯುಕ್ತ ಟಿ.ಆರ್ ಸುರೇಶ್ ಚಾಲನೆ ನೀಡಿದರು.

  ಕಡಲ ತಡಿಯ ಮಂಗಳೂರಿನಲ್ಲಿ ಈಗ ನವರಾತ್ರಿ ಉತ್ಸವದ ಸಡಗರ. ವೈಭವೋಪೇತ ವಿಶಿಷ್ಟ ಆಕರ್ಷಣೆಯ ನವರಾತ್ರಿ ಉತ್ಸವಕ್ಕೆ ಮಂಗಳೂರಿನ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಇಂದು ಚಾಲನೆ ನೀಡಲಾಯಿತು. ಶಕ್ತಿಯ ಪ್ರತೀಕವಾದ ನವದುರ್ಗೆಯರೊಂದಿಗೆ ಶಾರದಾ ದೇವಿಯ ಪ್ರತಿಮೆಯನ್ನು ಪ್ರತಿಷ್ಟಾಪಿಸಿ ಪೂಜೆ ಸಲ್ಲಿಸುವುದರೊಂದಿಗೆ ಮಂಗಳೂರಿನ ನವರಾತ್ರಿ ಉತ್ಸವಕ್ಕೆ ಚಾಲನೆ ನೀಡಲಾಯಿತು. ಮಂಗಳೂರಿನ ಪೊಲೀಸ್ ಆಯುಕ್ತ ಟಿ.ಆರ್ ಸುರೇಶ್ ಅವರು ಶಾರದಾ ದೇವಿಗೆ ಪೂಜೆ ಸಲ್ಲಿಸುವುದರೊಂದಿಗೆ ವೈಭವದ ನವರಾತ್ರಿ ಉತ್ಸವಕ್ಕೆ ಚಾಲನೆ ನೀಡಿದರು.

  ವಿಶಿಷ್ಟ ಮೆರಗುಗಳೊಂದಿಗೆ ಲಕ್ಷಾಂತರ ಜನರನ್ನು ಮಂಗಳೂರಿನ ದಸರಾ ಮಹೋತ್ಸವ ಆಕರ್ಷಿಸುತ್ತಿದೆ. ಮಂಗಳೂರು ದಸರಾದ ವಿಶಿಷ್ಟ ಆಕರ್ಷಣೆ ನವದುರ್ಗೆಯರ ಪ್ರತಿಷ್ಟಾಪನೆ, ಮಂಗಳೂರಿನ ಕುದ್ರೋಳಿ ದೇವಾಲಯದಲ್ಲಿ ಸ್ವರ್ಗವೇ ಧರೆಗಿಳಿದು ಬಂದಂತಿದೆ.

  ಶಕ್ತಿ ರೂಪಗಳಾದ ನವದುರ್ಗೆಯರನ್ನು ಪ್ರತಿಷ್ಟಾಪಸಿ ನವರಾತ್ರಿಯನ್ನು ಆಚರಿಸುವುದು ಮಂಗಳೂರು ದಸರಾ ವೈಶಿಷ್ಟ್ಯ. ಇಂದಿನಿಂದ ಸಪ್ಟೆಂಬರ್ 30 ವರೆಗೆ ನಡೆಯುವ ಈ ನವರಾತ್ರಿ ಉತ್ಸವದಲ್ಲಿ ಲಕ್ಷಾಂತರ ಮಂದಿ ಪಾಲ್ಗೊಳ್ಳುತ್ತಿದ್ದು, ದೇಶ ವಿದೇಶಗಳಿಂದ ಪ್ರವಾಸಿಗರು ಈ ಮಂಗಳೂರು ದಸರಾ ಉತ್ಸವನ್ನು ಕಣ್ತುಂಬಿಕೊಳ್ಳುತ್ತಾರೆ.

  ನವದುರ್ಗೆಯರು:

  Share Information
  Advertisement
  Click to comment

  You must be logged in to post a comment Login

  Leave a Reply