Connect with us

    LATEST NEWS

    ಮತಾಂತರದ ಹಿಂದೆ ಪಿಎಫ್ಐ-ಆಥಿರಾ ಆರೋಪ

    ಮತಾಂತರದ ಹಿಂದೆ ಪಿಎಫ್ಐ-ಆಥಿರಾ ಆರೋಪ

    ಕಾಸರಗೋಡು,ಸೆಪ್ಟಂಬರ್ 21: ಇಸ್ಲಾಂ ಧರ್ಮದ ಒಲವಿನಿಂದ ಮಾತೃಧರ್ಮವನ್ನು ತ್ಯಜಿಸಿ ಹೋಗಿದ್ದ ಯುವತಿ ಇದೀಗ ಮತ್ತೆ ಹಿಂದೂ ಧರ್ಮಕ್ಕೆ ವಾಪಾಸಾಗಿದ್ದಾಳೆ. ಕೇರಳದಲ್ಲಿ ನಡೆಯುತ್ತಿದೆ ಎನ್ನಲಾಗುತ್ತಿರುವ ಲವ್ ಜಿಹಾದ್ ಪ್ರಕರಣದಲ್ಲಿ ತಳುಕು ಹಾಕಿಕೊಂಡಿದ್ದ ಈ ಯುವತಿಯ ನಾಪತ್ತೆ ಪ್ರಕರಣ ಭಾರೀ ಚರ್ಚೆಗೂ ಕಾರಣವಾಗಿತ್ತು. ಲವ್ ಜಿಹಾದ್ ನ ಕೇಂದ್ರ ಸ್ಥಾನವೆಂಬಂತೆ ಗುರುತಿಸಿಕೊಂಡಿರುವ ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಉದುಮ ನಿವಾಸಿಯಾಗಿರುವ ಆಥಿರಾ ಇದೀಗ ಮತ್ತೆ ಹಿಂದೂ ಧರ್ಮಕ್ಕೆ ವಾಪಾಸಾಗುವ ಮೂಲಕ ಮತ್ತೆ ಸುದ್ಧಿಯಲ್ಲಿದ್ದಾಳೆ.

    ಘಟನೆಯ ವಿವರ

    ಕಳೆದ ಜೂನ್ 10 ರಂದು ಮನೆಯಿಂದ ನಾಪತ್ತೆಯಾಗಿದ್ದ ಆಥಿರಾ, ಮನೆಯಿಂದ ಹೊರಡುವ ಸಂದರ್ಭದಲ್ಲಿ ತನ್ನ ತಂದೆ ತಾಯಿಯರಿಗೆಂದೇ ಒಂದು ಪತ್ರವನ್ನು ಬರೆದಿಟ್ಟು ಹೋಗಿದ್ದಳು. ಈ ಪತ್ರದಲ್ಲಿ ತಾನು ಇಸ್ಲಾಂ ಧರ್ಮದ ಬಗ್ಗೆ ಆಸಕ್ತಳಾಗಿದ್ದೇನೆ. ಆ ಧರ್ಮವನ್ನು ಇನ್ನಷ್ಟು ಕಲಿಯಬೇಕು ಎನ್ನುವ ಉದ್ಧೇಶದಿಂದ ಮನೆ ಬಿಟ್ಟು ಹೋಗುತ್ತಿದ್ದೇನೆ ಎಂದು ಬರೆದಿದ್ದಳು.

    ಇದರಿಂದ ವಿಚಲಿತರಾದ ಆದಿರಾ ಪೋಷಕರು ಜೂನ್ 27 ರಂದು ಸ್ಥಳೀಯ ಪೋಲೀಸ್ ಠಾಣೆಯಲ್ಲಿ ತನ್ನ ಮಗಳ ನಾಪತ್ತೆ ದೂರು ನೀಡಿದ್ದರು. ಪೋಲೀಸ್ ಆಥಿರಾಳನ್ನು ಹುಡುಕುವ ಪ್ರಯತ್ನದಲ್ಲಿ ನಿರಾಸಕ್ತಿ ತೋರಿದಾಗ ಪೋಷಕರು ನ್ಯಾಯಾಲಯದಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದರು. ಇದರಿಂದ ಎಚ್ಚೆತ್ತ ಪೋಲೀಸರು ಆದಿರಾಳನ್ನು ಕಣ್ಣೂರು ಬಸ್ ನಿಲ್ದಾಣದ ಬಳಿ ಪತ್ತೆ ಹಚ್ಚಿ ನ್ಯಾಯಾಲಯದ ಮುಂದೆ ಹಾಜರು ಪಡಿಸಿದ್ದರು.

    ನ್ಯಾಯಾಲಯವು ಆಥಿರಾಳನ್ನು ಆಕೆಯ ಪೋಷಕರೊಂದಿಗೆ ಮನೆಗೆ ಕೊಂಡೊಯ್ಯಲು ಅನುಮತಿಯನ್ನೂ ನೀಡಿತ್ತು. ಈ ನಡುವೆ ಇಂದು ನಡೆದ ವಿದ್ಯಾಮಾನದಲ್ಲಿ ಆಥಿರಾ ತನ್ನ ಇಸ್ಲಾಂ ಧರ್ಮದ ಅನುಭವನ್ನು ಮಾಧ್ಯಮಗಳ ಮುಂದೆ ಹೇಳಿಕೊಂಡಿದ್ದಾಳೆ. ತನ್ನನ್ನು ಬಲವಂತವಾಗಿ ಹಾಗೂ ತನ್ನ ಮೈಂಡ್ ವಾಶ್ ಮಾಡಿ ಇಸ್ಲಾಂ ಧರ್ಮಕ್ಕೆ ಸೇರಿಸುವ ಪ್ರಯತ್ನ ನಡೆಯಿತು. ಕೆಲವು ಮುಸ್ಲಿಂ ಮೂಲಭೂತವಾದಿ ಸಂಘಟನೆಗಳೂ ಈ ಕುರಿತು ತನಗೆ ಒತ್ತಡವನ್ನೂ ಹೇರಿತ್ತು ಎಂದು ಮಾಹಿತಿ ನೀಡಿದ್ದಾಳೆ.

    ಹಿಂದೂ ಧರ್ಮದ ಬಗ್ಗೆ ಮಾಹಿತಿ ಇಲ್ಲ

    ಅಲ್ಲದೆ ಆಕೆಯ ಬಾಯಿಯಿಂದ ಬಂದ ಮತ್ತೊಂದು ಶಬ್ದ ಇಡೀ ಹಿಂದೂ ಸಮಾಜವನ್ನು ಎಚ್ಚೆತ್ತುಕೊಳ್ಳುವಂತೆಯೂ ಮಾಡಿದೆ. ಆಕೆ ಮಾಧ್ಯಮಗಳಿಗೆ ನೀಡಿದ ಸಂದರ್ಶನದಲ್ಲಿ ತನಗೆ ಹಿಂದೂ ಧರ್ಮದ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ. ಅದರ ಬಗ್ಗೆ ತನಗೆ ಯಾರೂ ತಿಳಿಸಿಯೂ ಕೊಟ್ಟಿಲ್ಲ ಎನ್ನುವ ಆಘಾತಕಾರಿ ಹಾಗೂ ಎಚ್ಚೆತ್ತುಕೊಳ್ಳುವ ಮಾಹಿತಿಯನ್ನು ನೀಡಿದ್ದಾಳೆ.

    ಆಥಿರಾ ಇಸ್ಲಾಂ ಧರ್ಮಕ್ಕೆ ಮತಾಂತರ ಹೊಂದಿರುವ ಹಿಂದೆ ಆಕೆಯ ಕೆಲವು ಸ್ನೇಹಿತೆಯರೂ ಹಾಗೂ ಇತರ ಕೆಲವು ವ್ಯಕ್ತಿಗಳೂ ಶಾಮೀಲಾಗಿದ್ದರು. ಆಥಿರಾ ನಾಪತ್ತೆಯಾದ ಬಳಿಕ ಉದುಮ ಪರಿಸರದಲ್ಲಿ ಈ ಕುರಿತು ಎರಡು ಕೋಮುಗಳ ನಡುವೆ ಸಂಘರ್ಷವೇರ್ಪಡುವ ಸಾಧ್ಯತೆಯೂ ದಟ್ಟವಾಗಿತ್ತು. ಈ ನಡುವೆ ಇದೀಗ ಇಸ್ಲಾಂ ಅರಸಿ ಹೋದ ಆಥಿರಾ ಇದೀಗ ಹಿಂದೂ ಧರ್ಮವೇ ಸಾಕೆಂದು ಮತ್ತೆ ವಾಪಾಸಾಗಿದ್ದಾಳೆ.

     

    Share Information
    Advertisement
    Click to comment

    You must be logged in to post a comment Login

    Leave a Reply