Connect with us

BANTWAL

ಪಂಪ್ ಶೆಡ್ಡಿಗೆ ಸಿಡಿಲು ಬಡಿದು ಲಕ್ಷಾಂತರ ಮೌಲ್ಯದ ವಸ್ತು ಬೆಂಕಿಗಾಹುತಿ

ಬಂಟ್ವಾಳ ನವೆಂಬರ್ 13: ಪಂಜಿಕಲ್ಲು ಗ್ರಾಮದ ಎನಿಲಕೋಡಿ ಎಂಬಲ್ಲಿ ಕೃಷಿಕರೊಬ್ಬರ ಪಂಪ್ ಶೆಡ್ಡಿಗೆ ಶನಿವಾರ ಸಂಜೆ ಸಿಡಿಲು ಬಡಿದ ಪರಿಣಾಮ ಲಕ್ಷಾಂತರ ಮೊತ್ತದ ನಷ್ಟ ಸಂಭವಿಸಿದೆ.


ಪ್ರಗತಿಪರ ಕೃಷಿಕ ನಾರಾಯಣ ಸಪಲ್ಯ ಎಂಬವರ ಮನೆ ಮತ್ತು ಅಡಿಕೆ ತೋಟದ ಮಧ್ಯೆ ಇರುವ ಪಂಪ್ ಶೆಡ್ಡಿಗೆ ರಾತ್ರಿ ಸುಮಾರು 8 ಗಂಟೆಗೆ ಸಿಡಿಲು ಬಡಿದಿದ್ದು, ಶೆಡ್ಡಿನಲ್ಲಿ ಭಾರೀ ಹೊಗೆ ಸಹಿತ ಬೆಂಕಿ ಕಾಣಿಸಿಕೊಂಡಿದೆ. ಶೆಡ್ಡಿನ ಮಾಡು ಸಂಪೂರ್ಣ ಸುಟ್ಟು ಕುಸಿದು ಬೀಳುತ್ತಿದ್ದಂತೆಯೇ ಒಳಗೆ ಗೋಣಿಯಲ್ಲಿ ತುಂಬಿಸಿಟ್ಟಿದ್ದ ಒಣ ಅಡಿಕೆ, ತೆಂಗಿನಕಾಯಿ, ಕೊಳವೆ ಬಾವಿ ಪಂಪ್ ಸಹಿತ ಲಕ್ಷಾಂತರ ರೂಪಾಯಿ ಮೊತ್ತದ ವಸ್ತುಗಳು ಸುಟ್ಟು ಕರಕಲಾಗಿದೆ. ಬೆಂಕಿ ಕೆನ್ನಾಲಗೆ ಹೆಚ್ಚುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಬಂಟ್ವಾಳ ಅಗ್ನಿಶಾಮಕದಳ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

Advertisement
Click to comment

You must be logged in to post a comment Login

Leave a Reply