BANTWAL
ಬಂಟ್ವಾಳ : ಸಿಡಿಲು ಬಡಿದು ಬಾಲಕ ಸಾವು…!!

ಬಂಟ್ವಾಳ ನವೆಂಬರ್ 15:ಸೋಮವಾರ ರಾತ್ರಿ ಸಿಡಿಲು ಬಡಿದ ಪರಿಣಾಮ ಬಾಲಕನೋರ್ವ ಮೃತಪಟ್ಟ ಘಟನೆ ಕರಿಯಂಗಳ ಗ್ರಾಮದ ಸಾಣೂರು ಪದವು ಎಂಬಲ್ಲಿ ನಡೆದಿದೆ. ಮೃತ ಬಾಲಕನನ್ನು ಸಾಣೂರುಪದವು ಗಣೇಶ್ ಆದಿದ್ರಾವಿಡ ಎಂಬವರ ಪುತ್ರ ಕಾರ್ತಿಕ್ (16) ಮೃತಪಟ್ಟ ಯುವಕ ಎಂದು ಗುರುತಿಸಲಾಗಿದೆ.
ರಾತ್ರಿ 9ರ ಸುಮಾರಿಗೆ ಊಟ ಮುಗಿಸಿ ಮಲಗಿದ್ದ ವೇಳೆ ಸಿಡಿಲು ಬಡಿದು ಕಾರ್ತಿಕ್ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಪ್ರಜ್ಞಾಹೀನನಾಗಿದ್ದ ಕಾರ್ತಿಕ್ ನನ್ನು ತಕ್ಷಣವೇ ಕೈಕಂಬ ಕ್ಲಿನಿಕ್ ಗೆ ಸಾಗಿಸಿದ್ದು ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ಸಾಗಿಸಲಾಗಿದೆ. ಪರೀಕ್ಷೆ ನಡೆಸಿದ ವೈದ್ಯರು ಕಾರ್ತಿಕ್ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
