DAKSHINA KANNADA
ಮಿಂಚು-ಸಿಡಿಲಿನ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ಸಾರ್ವಜನಿಕರಿಗೆ ಮನವಿ ಮಾಡಿದ ಪುತ್ತೂರು ಉಪ ವಿಭಾಗದ ಸಹಾಯಕ ಆಯುಕ್ತ ಜುಬಿನ ಮೊಹಾಪಾತ್ರ
ಪುತ್ತೂರು ಮೇ 15: ಕರಾವಳಿಯಲ್ಲಿ ಮಳೆಗಾಲದ ಆರಂಭದ ಸಂದರ್ಭ ಸಿಡಿಲು ಮಿಂಚು ಆರ್ಭಟ ಜೋರಾಗಿ ಇರಲಿದ್ದು, ಈ ಹಿನ್ನಲೆ ಮಿಂಚು-ಸಿಡಿಲಿನ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ಸಾರ್ವಜನಿಕರಿಗೆ ಪುತ್ತೂರು ಉಪ ವಿಭಾಗದ ಸಹಾಯಕ ಆಯುಕ್ತ ಜುಬಿನ ಮೊಹಾಪಾತ್ರ ಮನವಿ ಮಾಡಿದ್ದಾರೆ.
ಪುತ್ತೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು ಕಡಬ ಮತ್ತು ಸುಬ್ರಹ್ಮಣ್ಯ ದಲ್ಲಿ ಮೊದಲ ಮಳೆಗೇ ಇಬ್ಬರು ಸಿಡಿಲು ಬಡಿದು ಸಾವನ್ನಪ್ಪಿದ್ದಾರೆ, ಈ ಹಿನ್ನಲೆ ಸಿಡಿಲು ಬಡಿಯುವ ಸಂದರ್ಭದಲ್ಲಿ ಮನೆಯಿಂದ ಹೊರಗೆ ಹೋಗದಂತೆ ಸಾರ್ವಜನಿಕರಿಗೆ ಸೂಚಿಸಿದರು.
ಸಿಡಿಲಿನಿಂದ ಹಾನಿಯಾಗದಂತೆ ಎಚ್ಚರಿಕೆ ವಹಿಸಲು ಮಿಂಚು ಬಂಧಕದ ಅವಶ್ಯಕತೆಯಿದ್ದು, ಈ ಬಗ್ಗೆ ಈಗಾಗಲೇ ಸರಕಾರಕ್ಕೆ ಈ ಬಗ್ಗೆ ಪ್ರಸ್ತಾವನೆ ಕಳುಹಿಸಲಾಗಿದೆ ಎಂದರು. ಸರಕಾರದ ಅನುಮೋದನೆಗಾಗಿ ಕಾಯಲಾಗುತ್ತಿದ್ದು. ಈಗಾಗಲೇ ಸಿಡಿಲು ಹೆಚ್ಚಾಗಿ ಬಡಿಯುವ ಸ್ಥಳಗಳ ಗುರುತಿಸುವ ಕೆಲಸ ನಡೆಯುತ್ತಿದ್ದು, ಸರಕಾರದಿಂದ ಅನುಮತಿ ದೊರೆತ ತಕ್ಷಣವೇ ಕೂಡಲೇ ಕಾಮಗಾರಿ ಆರಂಭಿಸಲಾಗುವುದು ಎಂದರು. ಅಲ್ಲಿಯವರೆಗೆ ಜನ ಎಚ್ಚರಿಕೆಯಿಂದ ಇರಬೇಕಾಗುತ್ತದೆ ಎಂದರು.