Connect with us

  LATEST NEWS

  ಎಂಡೊಮೆಟ್ರಿಯೊಸಿಸ್ ಖಾಯಿಲೆಯಿಂದ ಬಳಲುತ್ತಿರುವ ಶಿಲ್ಪಾಶೆಟ್ಟಿ ತಂಗಿ ಶಮಿತಾ ಶೆಟ್ಟಿ

  ಮುಂಬೈ ಮೇ 15: ಬಾಲಿವುಡ್ ನಟಿ ಶಿಲ್ಪಾಶೆಟ್ಟಿಗೆ ಒಂದಿಲ್ಲೊಂದು ಸಂಕಷ್ಟ ಎದುರಾಗುತ್ತಿದೆ. ಈ ನಡುವೆ ತಂಗಿ ಶಮಿತಾ ಶೆಟ್ಟಿ ವಿಚಿತ್ರ ಕಾಯಿಲೆಯಿಂದ ಬಳಲುತ್ತಿದ್ದು, ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.


  ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವಿಡೋಯೋ ಮಾಡಿ ಪೋಸ್ಟ್ ಮಾಡಿರುವ ಶಮಿತಾ ಶೆಟ್ಟಿ ನಾನು ಎಂಡೊಮೆಟ್ರಿಯೊಸಿಸ್ ಎಂಬ ಕಾಯಿಲೆಗೆ ಶಸ್ತ್ರಚಿಕಿತ್ಸೆಗೆ ಒಳಗಾಗಿರೋದಾಗಿ ಹೇಳಿದ್ದಾರೆ. ಅಲ್ಲದೆ ಈ ಖಾಯಿಲೆ ಬಗ್ಗೆ ಹಲವು ಮಾಹಿತಿಗಳನ್ನು ಹಂಚಿಕೊಂಡಿರುವ ಅವರು ‘ಸುಮಾರು 40 ಪ್ರತಿಶತದಷ್ಟು ಮಹಿಳೆಯರು ಎಂಡೊಮೆಟ್ರಿಯೊಸಿಸ್ ನಿಂದ ಬಳಲುತ್ತಿದ್ದಾರೆ ಮತ್ತು ನಮ್ಮಲ್ಲಿ ಹೆಚ್ಚಿನವರಿಗೆ ಈ ಕಾಯಿಲೆಯ ಬಗ್ಗೆ ತಿಳಿದಿಲ್ಲ ಎಂದು ಹೇಳಿದರು: “ನನ್ನ ನೋವಿನ ಮೂಲ ಕಾರಣವನ್ನು ಕಂಡುಕೊಳ್ಳಲು ಸಹಕರಿಸಿದ ನನ್ನ ವೈದ್ಯರಾದ ನನ್ನ ಸ್ತ್ರೀರೋಗತಜ್ಞ ಡಾ ನೀತಾ ವರ್ತಿ ಮತ್ತು ನನ್ನ ಜಿಪಿ ಡಾ ಸುನೀತಾ ಬ್ಯಾನರ್ಜಿ ಇಬ್ಬರಿಗೂ ನಾನು ಧನ್ಯವಾದ ಹೇಳಲು ಬಯಸುತ್ತೇನೆ ಎಂದಿದ್ದಾರೆ.


  ಆಕೆಯ ಸಹೋದರಿ ಶಿಲ್ಪಾ ಶೆಟ್ಟಿ ಮಾಡಿದ ವಿಡಿಯೋದಲ್ಲಿ, ಶಮಿತಾ ಆಸ್ಪತ್ರೆಯ ಬೆಡ್ ಮೇಲೆ ಇದ್ದಾರೆ. ನಂತ್ರ ಶಿಲ್ಪಾ ತನ್ನ ಸಹೋದರಿಗೆ ಶಸ್ತ್ರಚಿಕಿತ್ಸೆಗೆ ಹೋಗುವ ಮುನ್ನ ಏನಾದ್ರೂ ಹೇಳಲು ಬಯಸುತ್ತೀರಾ ಎಂದು ಕೇಳುತ್ತಾರೆ. ಇದೆಲ್ಲಾ ನನ್ನ ದೇಹದ ನೋವಿನಿಂದಾಗಿ ಆಗ್ತಿದೆ. ಎಂದು ಶಮಿತಾ ಹೇಳುತ್ತಾರೆ. ಬಳಿಕ ಶಿಲ್ಪಾ ಆರೋಗ್ಯವಾಗಿರಿ, ಸಂತೋಷವಾಗಿರಿ ಎಂದು ಹೇಳುತ್ತಾರೆ. ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಅವರ ತಂಗಿ ನಟಿ ಶಮಿತಾ ಶೆಟ್ಟಿ ಯಾವಾಗಲೂ ತಮ್ಮ ಸಿನಿಮಾಗಳಿಗಿಂತ ವೈಯಕ್ತಿಕ ಜೀವನದಿಂದಲೇ ಹೆಚ್ಚು ಸುದ್ದಿಯಲ್ಲಿದ್ದಾರೆ. ನಟಿಗೆ 44 ವರ್ಷ ಆಗಿದೆ. ಆದರೆ ಇನ್ನೂ ಮದುವೆಯಾಗಿಲ್ಲ. ಶಮಿತಾ ಶೆಟ್ಟಿಗೆ ಈಗ 44 ವರ್ಷ. ಅವರ ಜೀವನ ಬಹಳಷ್ಟು ನೋವಿನ ಘಟ್ಟಗಳಿಂದ ಕೂಡಿತ್ತು.

  Share Information
  Advertisement
  Click to comment

  You must be logged in to post a comment Login

  Leave a Reply