LATEST NEWS
ಭಾರಿ ಅಲೆಗಳ ನಡುವೆ ಯುವಕನನ್ನು ರಕ್ಷಿಸಿದ ಜೀವರಕ್ಷಕ ಸಿಬ್ಬಂದಿ ವಿಡಿಯೋ ವೈರಲ್
ಭಾರಿ ಅಲೆಗಳ ನಡುವೆ ಯುವಕನನ್ನು ರಕ್ಷಿಸಿದ ಜೀವರಕ್ಷಕ ಸಿಬ್ಬಂದಿ ವಿಡಿಯೋ ವೈರಲ್
ಉಡುಪಿ ಜೂನ್ 14: ಮಲ್ಪೆ ಬೀಚ್ ನಲ್ಲಿ ನೀರು ಪಾಲಾಗುತ್ತಿದ್ದ ಯುವಕನನ್ನು ಜೀವಕ್ಷಕ ಸಿಬ್ಬಂದಿ ರಕ್ಷಿಸಿದ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಮೂರು ದಿನಗಳ ಹಿಂದೆ ಭದ್ರಾವತಿ ಮೂಲದ ಯುವಕರ ತಂಡ ಮಲ್ಪೆ ಬೀಚ್ ಗೆ ಬಂದಿದ್ದು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಿದ್ದರೂ ಲೆಕ್ಕಿಸದೆ ನೀರಿಗಿಳಿದಿದ್ದಾರೆ.
ಈ ಸಂದರ್ಭ ಒಬ್ಬ ಯುವಕ ಅಲೆಗಳ ಮಧ್ಯೆ ಸಿಕ್ಕಿ ಹಾಕಿಕೊಂಡಿದ್ದು, ಜೀವರಕ್ಷಣೆಗೆ ಒದ್ದಾಡುತ್ತಿದ್ದ, ಈ ಸಂದರ್ಭದಲ್ಲಿ ಮಲ್ಪೆಯ ಜೀವ ರಕ್ಷಕ ತಂಡದ ಮಧು ಎಂಬವರು ಸಮುದ್ರಕ್ಕೆ ಇಳಿದು ಯುವಕನನ್ನು ರಕ್ಷಿಸಿದ್ದಾರೆ.
ವಾಯು ಚಂಡಮಾರುತದ ಪರಿಣಾಮ ಸಮುದ್ರದಲ್ಲಿ ಭಾರಿ ಅಲೆಗಳು ಎಳುತ್ತಿದ್ದರು ತಮ್ಮ ಜೀವ ಲೆಕ್ಕಿಸದೆ ಸಮದ್ರದಲ್ಲಿ ಸಿಲುಕಿದ್ದ ಯುವಕನನ್ನು ರಕ್ಷಿಸಿದ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಜೀವ ರಕ್ಷಕ ಸಿಬ್ಬಂದಿಯ ಸಾಹಸಕ್ಕೆ ಮೆಚ್ಚುಗೆ ಸೂಚಿಸುತ್ತಿದ್ದಾರೆ.
ಅರಬ್ಬಿ ಸಮುದ್ರದಲ್ಲಿ ವಾಯುಚಂಡ ಮಾರುತ ಉಂಟಾದ ನಂತರ ಸಮುದ್ರಕ್ಕೆ ಇಳಿಯಬೇಡಿ ಎಂದು ಜಿಲ್ಲಾಡಳಿತ ಸೂಚನೆ ನೀಡಿತ್ತು. ಆದರೂ ಪ್ರವಾಸಿಗರು ಕಡಲಿಗೆ ಇಳಿಯದಂತೆ ಸೂಚನೆ ನೀಡಿದ್ದರೂ ಅದನ್ನು ಲೆಕ್ಕಿಸದೆ ಕೆಲ ಪ್ರವಾಸಿಗರು ನೀರಿಗಿಳಿಯುವ ದುಸ್ಸಾಹಸ ಮಾಡುತ್ತಿದ್ದಾರೆ.