ಸೂಲಿಬೆಲೆ ವಿರುದ್ದ ಅವಹೇಳನಕಾರಿ ಹೇಳಿಕೆ : ರೈ ವಿರುದ್ದ ಎಫ್ಐಆರ್ ದಾಖಲಿಸಲು ಕೋರ್ಟ್ ಸೂಚನೆ

ಮಂಗಳೂರು, ಜೂನ್ 15 : ಚಿಂತಕ , ವಾಗ್ಮಿ ಚಕ್ರವರ್ತಿ ಸೂಲಿಬೆಲೆ ವಿರುದ್ದ ಅವಹೇಳನಕಾರಿ ಹೇಳಿಕೆ ವಿಚಾರ ಸಂಬಂಧಿಸಿದಂತೆ ಮಾಜಿ ಸಚಿವ ರಮಾನಾಥ್ ರೈ ವಿರುದ್ದ ಪ್ರಕರಣ ದಾಖಲಿಸಲು ಮಂಗಳೂರಿನ ನ್ಯಾಯಾಲಯ ಸೂಚನೆ ನೀಡಿದೆ.

ಕಳೆದ ವಿಧಾನ ಸಭೆ ಚುನಾವಣಾ ಸಂದರ್ಭ ಉಳ್ಳಾಲದ ಅಸೈಗೋಳಿಯಲ್ಲಿ ನಡೆದ ಪ್ರಚಾದ ಸಭೆಯಲ್ಲಿ ಚಕ್ರವರ್ತಿ ಸೂಲಿಬೆಲೆ ವಿರುದ್ದ ಅವಹೇಳನಕಾರಿಯಾಗಿ ಮಾಜಿ ಸಚಿವರಾದ ರಮನಾಥ ರೈ ಹೇಳಿಕೆ ನೀಡಿದ್ದರು.

ಈ ಹೇಳಿಕೆ ವಿರುದ್ದ BJP ರಾಜ್ಯ ಅಲ್ಪಸಂಖ್ಯಾತ ಮೋರ್ಚಾ ಉಪಾಧ್ಯಕ್ಷರಾದ ರಹೀಂ ಉಚ್ಚಿಲ್ ಅವರು ನ್ಯಾಯಾಲಯದ ಮೇಟ್ಟಲೇರಿದ್ದರು.

ಈ ಹಿನ್ನೆಲೆಯಲ್ಲಿ IPC ಸೆಕ್ಷನ್ 500, 504 ಪ್ರಕರಣ ದಾಖಲಿಸಿದ ಮಾನ್ಯ ನ್ಯಾಯಾಲಯ ಮುಂದಿನ ತಿಂಗಳು ಕೋರ್ಟ್ ಗೆ ಹಾಜರಾಗಲು ರಮಾನಾಥ್ ರೈ ಗೆ ಸೂಚನೆ ನೀಡಿದೆ.

359 Shares

Facebook Comments

comments