Connect with us

LATEST NEWS

ಉಡುಪಿ ಜಿಲ್ಲೆಯಲ್ಲಿ ಕಾಲೇಜು ಕಡೆ ಮುಖಮಾಡದ ವಿಧ್ಯಾರ್ಥಿಗಳು ..ಆನ್ ಲೈನ್ ಕ್ಲಾಸ್ ಗೆ ಹೆಚ್ಚು ಒತ್ತು

ಉಡುಪಿ ನವೆಂಬರ್ 21: ಸಾಂಕ್ರಾಮಿಕ ಕೊರೋನಾದ ನಡುವೆ ರಾಜ್ಯಾದ್ಯಂತ ಪದವಿ ಕಾಲೇಜುಗಳನ್ನು ಸರ್ಕಾರ ಆರಂಭಿಸಿದೆ. ಉಡುಪಿ ಜಿಲ್ಲೆಯಲ್ಲಿ ವಿದ್ಯಾರ್ಥಿಗಳು ತೀರಾ ನೀರಸ ಪ್ರತಿಕ್ರಿಯೆ ಯನ್ನು ತೋರಿದ್ದಾರೆ. ಖಾಸಗಿ, ಅನುದಾನಿತ ಮತ್ತು ಸರಕಾರಿ ಕಾಲೇಜುಗಳು ಸೇರಿ ಜಿಲ್ಲೆಯಲ್ಲಿ 55 ಕಾಲೇಜುಗಳಿವೆ‌. ಅಂತಿಮ ಪದವಿ ವಿಭಾಗದಲ್ಲಿ 9072 ವಿದ್ಯಾರ್ಥಿಗಳು ಈಗಾಗಲೇ ದಾಖಲಾತಿ ಮಾಡಿಕೊಂಡಿದ್ದಾರೆ. ಈ ಪೈಕಿ ಕೇವಲ 307 ವಿದ್ಯಾರ್ಥಿಗಳು ಮಾತ್ರ ತರಗತಿಗೆ ಹಾಜರಾಗಿದ್ದಾರೆ. ಈ ಮೂಲಕ ರೆಗ್ಯುಲರ್ ಕ್ಲಾಸ್ ಬೇಡ , ನಮಗೆ ಮನಸ್ಸಿಲ್ಲ ಎಂಬೂದನ್ನು ಪ್ರದರ್ಶನ ಮಾಡಿದ್ದಾರೆ.


ಮಂಗಳೂರು ವಿಶ್ವವಿದ್ಯಾನಿಲಯದ ಅಧೀನದಲ್ಲಿ ಬರುವ 36 ಖಾಸಗಿ ಕಾಲೇಜಿನಲ್ಲಿ 3766 ವಿದ್ಯಾರ್ಥಿಗಳಿದ್ದಾರೆ. ಈ ಪೈಕಿ ಕೇವಲ 38 ವಿದ್ಯಾರ್ಥಿಗಳು ಹಾಜರಾಗಿದ್ದಾರೆ. ಉಡುಪಿ ಜಿಲ್ಲೆಯಲ್ಲಿ 9 ಸರ್ಕಾರಿ ಕಾಲೇಜುಗಳಿದ್ದು 2829 ವಿದ್ಯಾರ್ಥಿಗಳ ಪೈಕಿ 232 ಮಂದಿ ಹಾಜರಾಗಿದ್ದಾರೆ. ಜಿಲ್ಲೆಯ 10 ಅನುದಾನಿತ ಕಾಲೇಜುಗಳ ಲೆಕ್ಕಾಚಾರ ನೋಡೋದಾದ್ರೆ, 2577 ವಿದ್ಯಾರ್ಥಿಗಳ ಪೈಕಿ ಕೇವಲ 37 ಜನ ಮಾತ್ರ ತರಗತಿಗೆ ಬಂದಿದ್ದಾರೆ. ಕೆಲ ಕಾಲೇಜಿನಲ್ಲಿ ಒಬ್ಬ ವಿದ್ಯಾರ್ಥಿ ಬಾರದ ಉದಾಹರಣೆ ಇದೆ. ಜಿಲ್ಲೆಯಲ್ಲಿ 6000 ವಿದ್ಯಾರ್ಥಿಗಳ ಕೊರೋನ ಟೆಸ್ಟ್ ಆಗಿದ್ದು, 7 ಜನರಲ್ಲಿ ಕೊರೋನ ಕಾಣಿಸಿದೆ. ಸಾಂಕ್ರಾಮಿಕ ರೋಗದ ಅಬ್ಬರ ಇಳಿಕೆಯಾದ್ರೂ ವಿದ್ಯಾರ್ಥಿಗಳು ಕಾಲೇಜಿಗೆ ಬರಲು ಮನಸ್ಸು ಮಾಡುತ್ತಿಲ್ಲ. ಆನ್ ಲೈನ್ ಕ್ಲಾಸಿಗೆ ಒಗ್ಗಿಕೊಂಡಂತೆ ಕಾಣುತ್ತಿದೆ.

Facebook Comments

comments