LATEST NEWS
ಚಿರತೆ ಆಸ್ಪತ್ರೆಯೊಳಗೆ….ರೋಗಿಗಳು ರೋಡ್ ನಲ್ಲಿ

ಮಹಾರಾಷ್ಟ್ರ ಡಿಸೆಂಬರ್ 13: ಮಹಾರಾಷ್ಟ್ರದ ನಂದೂರಬಾರ್ ತಾಲೂಕಿನಲ್ಲಿ ಅಚ್ಚರಿಯ ಘಟನೆಯೊಂದು ನಡೆದಿದ್ದು, ಚಿರತೆಯೊಂದು ಆಸ್ಪತ್ರೆಯೊಳಗೆ ನುಗ್ಗಿದ ಪರಿಣಾಮ ರೋಗಿಗಳೆಲ್ಲಾ ಆಸ್ಪತ್ರೆ ಹೊರಗಡೆ ನಿಲ್ಲಬೇಕಾದ ಪರಿಸ್ಥಿತಿ ಬಂದಿದೆ.
ಮಹಾರಾಷ್ಟ್ರದ ನಂದೂರ್‌ಬಾರ್ ಜಿಲ್ಲೆಯಲ್ಲಿರುವ ಶಹದಾ ಪ್ರದೇಶದ ಆದಿತ್ಯ ಹೆರಿಗೆ ಮತ್ತು ಕಣ್ಣಿನ ಆಸ್ಪತ್ರೆಯಲ್ಲಿ ಮಂಗಳವಾರ ಘಟನೆ ಸಂಭವಿಸಿದ್ದು, ಆಸ್ಪತ್ರೆಯೊಳಗೆ ರೋಗಿಗಳು ಇದ್ದ ವೇಳೆ ರಾತ್ರೋ ರಾತ್ರಿ ಚಿರತೆಯೊಂದು ಆಸ್ಪತ್ರೆ ಕಟ್ಟಡದ ಒಳಗೆ ಪ್ರವೇಶಿಸಿದೆ. ಇದನ್ನು ಗಮನಿಸಿದ ಆಸ್ಪತ್ರೆಯ ಸಿಬಂದಿ ಕೂಡಲೇ ಸಮಯ ಪ್ರಜ್ಞೆ ಮೆರೆದು ರೋಗಿಗಳು ಇರುವ ಕೊಠಡಿಯ ಬಾಗಿಲನ್ನು ಮುಚ್ಚಿ ಬಳಿಕ ಚಿರತೆ ಒಳಗೆ ಬಂದ ಬಾಗಿಲನ್ನು ಹೊರಗಿನಿಂದ ಬಂದು ಲಾಕ್ ಮಾಡಿದ್ದಾನೆ ಇದರಿಂದ ಚಿರತೆಗೆ ಹೊರಬರಲು ಸಾಧ್ಯವಾಗದೆ ಆಸ್ಪತ್ರೆಯೊಳಗೆ ಬಂಧಿಯಾಗಿದೆ. ಕೂಡಲೇ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿ ಬಳಿಕ ಸ್ಥಳಕ್ಕೆ ಬಂದ ಅರಣ್ಯ ಅಧಿಕಾರಿಗಳು ಚಿರತೆಯನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
