LATEST NEWS
ಕೊಡ್ಲಾಡಿಯಲ್ಲಿ ನೀರಿನ ಟ್ಯಾಂಕ್ ಒಳಗೆ ಬಿದ್ದ ಚಿರತೆ

ಕುಂದಾಪುರ, ಮೇ 26: ತಾಲೂಕಿನ ಕೊಡ್ಲಾಡಿಯಲ್ಲಿ ನೀರಿನ ಟ್ಯಾಂಕ್ ಒಳಗೆ ಬಿದ್ದ ಚಿರತೆಯನ್ನು ಅರಣ್ಯಧಿಕಾರಿಗಳು ರಕ್ಷಿಸಿದ ಘಟನೆ ಮಂಗಳವಾರ ನಡೆದಿದೆ.
ಕೊಡ್ಲಾಡಿಯ ಚಂದ್ರ ಶೆಟ್ಟಿಯವರ ಮನೆಯ ನೀರಿನ ಟ್ಯಾಂಕ್ ಗೆ ೫ ವರ್ಷದ ಗಂಡು ಚಿರತೆ ಬಿದ್ದಿದ್ದು, ಇದನ್ನು ಗಮನಿಸಿದ ಮನೆಯವರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.

ಆಹಾರ ಹುಡುಕಿಕೊಂಡು ಬಂದ ಚಿರತೆ ನೀರಿನ ಟ್ಯಾಂಕ್ ಗೆ ಬಿದ್ದಿದೆ. ಮಂಗಳವಾರ ಮುಂಜಾನೆ ವೇಳೆಗೆ ನೀರಿನ ಟ್ಯಾಂಕಿಗೆ ಚಿರತೆ ಬಿದ್ದಿದೆ ಎನ್ನಲಾಗಿದ್ದು, ಮಧ್ಯಾಹ್ನ ಮನೆಯವರು ಗಮನಿಸಿ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಭೇಟಿ ನೀಡಿದ ಅರಣ್ಯಾಧಿಕಾರಿ ಪ್ರಭಾಕರ್, ಶರತ್, ಶಿವಕುಮಾರ್, ಉದಯ್, ರಂಜಿತ್, ವಿಜಯ್ ಯವರ ತಂಡ ಚಿರತೆಯನ್ನು ಮೇಲಕ್ಕೆತ್ತಿ ರಕ್ಷಿಸಿದ್ದಾರೆ. ಮಂಗಳವಾರ ತಡರಾತ್ರಿ ಚಿರತೆಯನ್ನು ಕಾಡಿಗೆ ಬಿಡಲಾಗುತ್ತದೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.