Connect with us

KARNATAKA

ಕೇರಳಾದಿಂದ ರೆಮ್ಡಿಸಿವಿರ್​ ತಂದು ಬೆಂಗಳೂರಿನಲ್ಲಿ ಅಧಿಕ ಬೆಲೆಗೆ ಮಾರಾಟ: ಮೂವರ ಬಂಧನ

ಬೆಂಗಳೂರು, ಮೇ 26: ಕೇರಳದಿಂದ ರೆಮ್ಡಿಸಿವಿರ್​ ತಂದು ಬೆಂಗಳೂರಿನಲ್ಲಿ ಅಧಿಕ ಬೆಲೆಗೆ ಮಾರಾಟ ಮಾಡುತ್ತಿದ್ದ ಮೂವರನ್ನು ಬಸವೇಶ್ವರ ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಸಂಜೀವ್ ಕುಮಾರ್ (32), ಪ್ರತೀಕ್ (37) ಹಾಗೂ ಅಭಿಜಿತ್ (20) ಬಂಧಿತ ಆರೋಪಿಗಳು. ದಂಧೆಯ ಬಗ್ಗೆ ಮಾಹಿತಿ ಪಡೆದು ಗ್ರಾಹಕರ ಸೋಗಿನಲ್ಲಿ ಕಾರ್ಯಾಚರಣೆಗೆ ಇಳಿದ ಪೊಲೀಸರು ಆರೋಪಿಗಳನ್ನು ಸಂಪರ್ಕಿಸಿ ದಂಧೆಯನ್ನು ಬಯಲಿಗೆ ಎಳೆದಿದ್ದಾರೆ.

ಇನ್ಸ್​ಪೆಕ್ಟರ್​ ಎರ್ರಿಸ್ವಾಮಿ ನೇತೃತ್ವದ ತಂಡ ದಾಳಿ ಮಾಡಿದ್ದು, 1 ವಯಲ್ ಇಂಜೆಕ್ಷನ್​ಗೆ 10 ಸಾವಿರ ರೂಪಾಯಿ ಡಿಮ್ಯಾಂಡ್ ಮಾಡುತ್ತಿದ್ದರು. ಅಭಿಜಿತ್ ಎಂಬಾತನ ಬಳಿ ಇಂಜೆಕ್ಷನ್ ಕಲೆಕ್ಟ್ ಮಾಡಿಕೊಳ್ಳುವಂತೆ ತಿಳಿಸಿದ್ದರು.

ಇಂಜೆಕ್ಷನ್ ಪಡೆಯುವ ನೆಪದಲ್ಲಿ ತೆರಳಿ ಮೂವರೂ ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತರಿಂದ 25 ವಯಲ್ಸ್ ರೆಮ್ಡಿಸಿವಿರ್ ಇಂಜಕ್ಷನ್​ ವಶಕ್ಕೆ ಪಡೆಯಲಾಗಿದ್ದು, ಹೆಚ್ಚಿನ ವಿಚಾರಣೆ ಕೈಗೊಂಡಿದ್ದಾರೆ.