LATEST NEWS
ಚಿರತೆ ಸೆರೆಗೆ ಅರಣ್ಯ ಇಲಾಖೆಯಿಂದ ಬೋನು

ಮಂಗಳೂರು ಅಕ್ಟೋಬರ್ 06: ಮಂಗಳೂರು ನಗರದ ಮರೋಳಿ ಜಯನಗರದಲ್ಲಿ ಭಾನುವಾರ ಸಂಜೆ ಪತ್ತೆಯಾಗಿ ಆತಂಕ ಮೂಡಿಸಿದ್ದ ಚಿರತೆಯನ್ನು ಸೆರೆಹಿಡಿಯಲು, ಅರಣ್ಯ ಅರಣ್ಯ ಅಧಿಕಾರಿಗಳು ಕೂಂಬಿಂಗ್ (ಕಾರ್ಯಾಚರಣೆ) ಮುಂದುವರಿಸಿದ್ದು, ಬೋನು ಇಟ್ಟು ಸೆರೆಗೆ ಪ್ರಯತ್ನಿಸಿದ್ದಾರೆ.
ಆ ಭಾಗದಲ್ಲಿ ಕ್ಯಾಮೆರಾ ಟ್ರ್ಯಾಪ್ ಮತ್ತು ಬೋನು ಅಳವಡಿಸಿದೆ. ಸ್ಥಳೀಯರು ಹೇಳುವಂತೆ ಚಿರತೆ ಕತ್ತಲಾದ ಮೇಲೆ ಹೆಚ್ಚಾಗಿ ಕಾಣಿಸಿಕೊಂಡಿದೆ. ಹೀಗಾಗಿ, ಸಂಜೆಯಾದ ಮೇಲೆ ಮನೆಯಿಂದ ಹೊರ ಹೋಗದಂತೆ ಸ್ಥಳೀಯರಲ್ಲಿ ಜಾಗೃತಿ ಮೂಡಿಸಲಾಗಿದೆ. ಸ್ಥಳೀಯರ ಮನೆಯಲ್ಲಿರುವ ಸಿಸಿಟಿವಿ ಕ್ಯಾಮೆರಾ ಫೂಟೇಜ್‌ಗಳನ್ನು ಪರಿಶೀಲಿಸಲಾಗಿದ್ದು, ಸೋಮವಾರ ಚಿರತೆ ಕಾಣಿಸಿಕೊಂಡಿಲ್ಲ.

ಕೆಲ ದಿನಗಳ ಹಿಂದೆ ಪಚ್ಚನಾಡಿ ಭಾಗದಲ್ಲಿ ಚಿರತೆ ಕಂಡಿರುವ ಬಗ್ಗೆ ಸಾರ್ವಜನಿಕರು ತಿಳಿಸಿದ್ದರು ಎಂದು ಡಿಸಿಎಫ್ ಡಾ. ದಿನೇಶ್ ಕುಮಾರ್ ತಿಳಿಸಿದರು. ಚಿರತೆ ಸಂಚಾರ ಖಾತ್ರಿಯಾದರೆ, ಹೆಚ್ಚುವರಿ ಬೋನುಗಳನ್ನು ಇಟ್ಟು ಅದನ್ನು ಸೆರೆ ಹಿಡಿಯಲು ಕ್ರಮವಹಿಸಲಾಗುವುದು ಎಂದು ಅಧಿಕಾರಿಗಳು ವಿವರಿಸಿದರು.