LATEST NEWS
ಉಡುಪಿ ಅರಣ್ಯ ಅಧಿಕಾರಿಗಳ ಕಾರ್ಯಾಚರಣೆ : ಬೋನಿಗೆ ಬಿದ್ದ ಚಿರತೆ

ಉಡುಪಿ ಅಗಸ್ಟ್ 21: ಕಾಪು ತಾಲೂಕಿನ ಪಡುಬಿದ್ರಿ ಸಮೀಪ ಕಳೆದ ಕೆಲವು ದಿನಗಳಿಂದ ಆತಂಕ ಹುಟ್ಟಿಸಿದ್ದ ಚಿರತೆಯನ್ನು ಕೊನೆಗೂ ಬೋನಿಗೆ ಬಿಳಿಸುವಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.
ಸಾಂತೂರು ರವಿ ಶೆಟ್ಟಿ ಎಂಬವರ ಮನೆಯ ಸಿಸಿ ಮನೆಯ ಕ್ಯಾಮರಾದಲ್ಲಿ ತುಂಬಾ ದಿನಗಳಿಂದ ಚಿರತೆ ಒಡಾಟದ ದೃಶ್ಯ ಸೆರೆಯಾಗಿತ್ತು. ಈ ಹಿನ್ನೆಲೆ ಅರಣ್ಯಾಧಿಕಾರಿಗಳ ನೆರವಿನೊಂದಿಗೆ ಚಿರತೆ ಸೆರೆ ಹಿಡಿಯಲು ಬೊನ್ ಇಡಲಾಗಿತ್ತು.

ನಿನ್ನೆ ತಡರಾತ್ರಿ ಚಿರತೆ ಚಿರತೆ ಬೋನಿಗೆ ಬಿದ್ದಿದ್ದು, ಇಂದು ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ, ಹೆಣ್ಣು ಚಿರತೆಯನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುವ ವ್ಯವಸ್ಥೆ ಮಾಡಿದ್ದಾರೆ. ವಲಯ ಅರಣ್ಯಾಧಿಕಾರಿ ಕ್ಲಿಪರ್ಟ್ ಲೋಬೋ, ಅರಣ್ಯ ಅಧಿಕಾರಿಗಳಾದ ಜೀವನ್ ದಾಸ್ ಶೆಟ್ಟಿ, ಗುರುರಾಜ್, ಅಭಿಲಾಶ್ ಜಯರಾಮ ಶೆಟ್ಟಿ, ಮಂಜುನಾಥ್ ನಾಯಕ್, ಪರಶುರಾಮ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.