Connect with us

LATEST NEWS

ಮುಂಬೈ: ಮಹಿಳೆಯ ಮೇಲೆ ಚಿರತೆ ದಾಳಿ…ವಾಕಿಂಗ್ ಸ್ಟಿಕ್ ನಲ್ಲಿ ಚಿರತೆ ಓಡಿಸಿದ ಮಹಿಳೆಯ ವಿಡಿಯೋ ವೈರಲ್

ಮುಂಬೈ: ಮಹಿಳೆಯೊಬ್ಬರ ಮೇಲೆ ಚಿರತೆಯೊಂದು ದಾಳಿ ನಡೆಸಿದ್ದು, ಮಹಿಳೆ ತನ್ನ ಊರುಗೋಲಿನಿಂದ ಚಿರತೆಯನ್ನು ಒಡಿಸಿರುವ ಘಟನೆ ಮುಂಬೈಯಲ್ಲಿ ನಡೆದಿದ್ದು, ಈ ಘಟನೆಯ ಸಿಸಿಟಿವಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.


ಮುಂಬೈನ ಉಪನಗರ ಗೋರೆಗಾಂವ್ ನ ಆರೆ ಕಾಲೋನಿಯಲ್ಲಿ ಈ ಘಟನೆ ನಡೆದಿದ್ದು, 55 ವರ್ಷ ಪ್ರಾಯದ ಮಹಿಳೆಯೊಬ್ಬರು ತಮ್ಮ ವಾಕಿಂಗ್ ಸ್ಟಿಕ್ ಹಿಡಿದುಕೊಂಡು ಮನೆಯ ಹೊರಗೆ ಬಂದು ಜಗುಲಿಯ ಮೇಲೆ ಕುಳಿತಿದ್ದಾರೆ. ಈ ಸಂದರ್ಭ ಮಹಿಳೆಯ ಹಿಂದೆ ಜಾಗದಲ್ಲಿ ಅವಿತು ಕುಳಿತಿದ್ದ ಚಿರತೆ ಸೀದಾ ಮಹಿಳೆಯ ಮೇಲೆ ದಾಳಿ ನಡೆಸಿದೆ.


ಕೂಡಲೇ ಮಹಿಳೆ ಚಿರತೆಯನ್ನು ಓಡಿಸಲು ತಮ್ಮ ವಾಕಿಂಗ್ ಸ್ಟಿಕ್ ನ್ನು ಬಳಸಿ ಓಡಿಸಿದ್ದಾರೆ. ಈ ಸಂದರ್ಭ ಮಹಿಳೆಗೆ ಸಣ್ಣಪುಟ್ಟ ಗಾಯಗಳಾಗಿದೆ. ಈ ಪ್ರದೇಶದಲ್ಲಿ ನಡೆದ ನಾಲ್ಕನೇ ಚಿರತೆ ದಾಳಿ ಇದಾಗಿದೆ.ಸ್ಥಳೀಯರು ಜನರು ಭಯದಲ್ಲೇ ಬದುಕುವಂತಾಗಿದೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *