Connect with us

    DAKSHINA KANNADA

    ನೀರೆಂದು ಭಾವಿಸಿ ಪೆಟ್ರೋಲ್ ಕುಡಿದ ವೃದ್ಧೆ ಸಾವು

    ಪುತ್ತೂರು ಸೆಪ್ಟೆಂಬರ್ 30: ನೀರೆಂದು ಭಾವಿಸಿ ಪೆಟ್ರೋಲ್ ಕುಡಿದ ವೃದ್ಧೆ ಸಾವನಪ್ಪಿರುವ ಘಟನೆ ಪೆರ್ನೆ ಎಂಬಲ್ಲಿ ನಡೆದಿದೆ. ಮೃತ ಮಹಿಳೆಯನ್ನು ಪದ್ಮಾವತಿ(79) ಎಂದು ಗುರುತಿಸಲಾಗಿದೆ.


    ಸೆಪ್ಟೆಂಬರ್ 26ರಂದು ಪೆರ್ನೆಯ ಮಗಳ ಮನೆಗೆ ಪದ್ಮಾವತಿ ಬಂದಿದ್ದರು. ಹುಲ್ಲು ಕತ್ತರಿಸುವ ಯಂತ್ರಕ್ಕೆಂದು ಮನೆಯವರು ಬಾಟಲಿಯಲ್ಲಿ ಪೆಟ್ರೋ ಲ್ ತಂದಿಟ್ಟಿದ್ದರು. ದೃಷ್ಟಿದೋಷದಿಂದ ಬಳಲುತ್ತಿದ್ದ ಅಜ್ಜಿ, ಪೆಟ್ರೋ ಲ್ ಇದ್ದ ಬಾಟಲಿಯನ್ನ ನೀರೆಂದು ಭಾವಿಸಿ ಕುಡಿದಿದ್ದರು. ಅಸ್ವಸ್ಥರಾಗಿದ್ದ ಅವರನ್ನು ಮಂಗಳೂರಿನ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೆ ಬುಧವಾರ ಕೊನೆಯುಸಿರೆಳೆದರು. ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply