LATEST NEWS
ಬೈಂದೂರು – ಮನೆಯ ಅಂಗಳದಲ್ಲಿ ಮಲಗಿದ್ದ ನಾಯಿ ಹೊತ್ತೊಯ್ದ ಚಿರತೆ – ಸಿಸಿಟಿವಿ ವಿಡಿಯೋ
ಬೈಂದೂರು ನವೆಂಬರ್ 08: ಕರಾವಳಿಯಲ್ಲಿ ಚಿರತೆ ಹಾವಳಿ ಜೋರಾಗಿದೆ. ಕಾಡಿನಲ್ಲಿರಬೇಕಾದ ಚಿರತೆ ಇದೀಗ ಆರಾಮಾಗಿ ನಾಡಿನಲ್ಲಿ ತಿರುಗಾಡಿಗೊಂಡು ಇದೆ. ಇದೀಗ ಮನೆಗಳಲ್ಲಿರುವ ನಾಯಿಗಳ ಮೇಲೆ ಚಿರತೆಗಳ ದಾಳಿ ಪ್ರಾರಂಭವಾಗಿದ್ದು, ಬೈಂದೂರಿನಲ್ಲಿ ಮನೆಯಂಗಳದಲ್ಲಿ ಮಲಗಿದ್ದ ನಾಯಿಯನ್ನು ಚಿರತೆ ಹೊತ್ತೊಯ್ದಿದೆ.
ಬೈಂದೂರು ತಾಲೂಕಿನ ಕಟ್ ಬೆಲ್ತೂರು ಗ್ರಾಪಂ ವ್ಯಾಪ್ತಿಯ ದೇವಳಕುಂದ ಎಂಬಲ್ಲಿ ಈ ಘಟನೆ ನಡೆದಿದ್ದು, ಮನೆಯ ಸಿಸಿಟಿವಿಯಲ್ಲಿ ದೃಶ್ಯ ರೆಕಾರ್ಡ್ ಆಗಿದೆ. ದೇವಳಕುಂದ ಗ್ರಾಮದ ಜಾಡಿಕಾಸ್ರ್ ನ ಸುಧೀರ್ ಶೆಟ್ಟಿ ಎಂಬವರ ಮನೆಯಲ್ಲಿ ಈ ಘಟನೆ ನಡೆದಿದೆ. ಹೊಂಚು ಹಾಕಿಕೊಂಡು ಬರುವ ಚಿರತೆ ಅಂಗಳದಲ್ಲಿ ಮಲಗಿದ್ದ ನಾಯಿಯ ಮೇಲೆ ಏಕಾಏಕಿಯಾಗಿ ದಾಳಿ ನಡೆಸಿದೆ ಗಾಢ ನಿದ್ದೆಯಲ್ಲಿದ್ದ ನಾಯಿಗೆ ಚಿರತೆಯ ಬಾಯಿಯಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಿಲ್ಲ. ಕ್ಷಣಾರ್ಧದಲ್ಲಿ ಚಿರತೆ ನಾಯಿಯನ್ನು ಹೊತ್ತುಕೊಂಡು ಕಾಡಿನೊಳಗೆ ಓಡಿ ಹೋಗಿದೆ.
ಚಿರತೆ ಕಾಣಿಸಿಕೊಂಡಿದ್ದರಿಂದ ಗ್ರಾಮಸ್ಥರಿಗೆ ಆತಂಕ ಶುರುವಾಗಿದೆ. ಬೋನಿಟ್ಟು ಚಿರತೆ ಸೆರೆ ಹಿಡಿಯುವಂತೆ ಅರಣ್ಯ ಇಲಾಖೆಗೆ ಮನವಿ ಮಾಡಿದ್ದಾರೆ.