KARNATAKA
ಆ್ಯಂಕರ್ ಅನುಶ್ರೀ ಆರೆಸ್ಟ್ ಆಗದಂತೆ ತಡೆದ ಷುಗರ್ ಡ್ಯಾಡಿ ಯಾರು…? – ಪ್ರಶಾಂತ್ ಸಂಬರಗಿ

ಬೆಂಗಳೂರು ಅಕ್ಟೋಬರ್ 2: ಈಗಾಗಲೇ ಮಂಗಳೂರು ಸಿಸಿಬಿ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ಎದುರಿಸಿರುವ ಆ್ಯಂಕರ್ ಕಂ ನಟಿ ಅನುಶ್ರೀಗೆ ವಕೀಲ ಪ್ರಶಾಂತ್ ಸಂಬರಗಿ ಮತ್ತೊಂದು ಬಾಬ್ ಸಿಡಿಸಿದ್ದಾರೆ.
ಇಂದು ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ನನ್ನ ವಿಚಾರಣೆ ಬಳಿಕ ಮಾಧ್ಯಮಗಳು ನನ್ನನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿದ್ದಾರೆ ಎಂದು ಅನುಶ್ರೀ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಸಂದೇಶದಲ್ಲಿ ಕಣ್ಣೀರಿಟ್ಟಿದ್ದರು. ಇದಾದ ಕೆಲವೇ ಗಂಟೆಗಳಲ್ಲಿ ‘ಆಕೆಯ ರಕ್ಷಣೆಗೆ ಷುಗರ್ ಡ್ಯಾಡಿಯೊಬ್ಬರು ನಿಂತಿದ್ದಾರೆ’ ಎಂದು ವಕೀಲ ಪ್ರಶಾಂತ್ ಸಂಬರಗಿ ಟ್ವಿಟರ್‌ನಲ್ಲಿ ಗಂಭೀರ ಆರೋಪ ಮಾಡಿದ್ದಾರೆ.

ನಟಿ ಸಂಜನಾ ಗರ್ಲಾನಿ ವಿರುದ್ಧ ಆರೋಪಗಳ ಸುರಿಮಳೆ ಸುರಿಸಿದ್ದ ಅವರು, ಈಗ ಅನುಶ್ರೀ ವಿರುದ್ಧವೂ ಆರೋಪಗಳನ್ನು ಮಾಡಿರುವುದು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಗ್ರಾಸವಾಗಿದೆ. ‘ಇಲ್ಲಿಯವರೆಗೂ ಅನುಶ್ರೀಯ ಬಂಧನವಾಗದಂತೆ ಷುಗರ್ ಡ್ಯಾಡಿ ತಡೆದಿದ್ದಾರೆ. ಇನ್ನು ಮುಂದೆ ಅದು ಸಾಧ್ಯವಾಗುವುದಿಲ್ಲ. ಆಕೆಯ ತಪ್ಪಿಗೆ ಶಿಕ್ಷೆಯಾಗುವುದು ನಿಶ್ಚಿತ. ಅನುಶ್ರೀಯ ಮತ್ತಷ್ಟು ರಹಸ್ಯಗಳು ಬಯಲಾಗುವುದು ಗ್ಯಾರಂಟಿ’ ಎಂದು ಟ್ವೀಟ್ ಮಾಡಿದ್ದಾರೆ.
ಅನುಶ್ರೀ ‘ರಿಂಗ್ ಮಾಸ್ಟರ್’ ಸಿನಿಮಾದಲ್ಲಿ ಅಭಿನಯಿಸಿದ್ದರು. ಇದು ಥಾಯ್ ಸಿನಿಮಾವಾದ ‘ಕೌಂಟ್‌ಡೌನ್’ನ ನಕಲಾಗಿದೆ. ಈ ಸಿನಿಮಾದಲ್ಲಿ ಹೊಸವರ್ಷದ ಆಚರಣೆಗೆ ಅನುಶ್ರೀ ಮತ್ತು ಆಕೆಯ ಸ್ನೇಹಿತರು ಮುಂದಾಗುತ್ತಾರೆ. ಆಗ ಡ್ರಗ್ಸ್ ಪೆಡ್ಲರ್‌ಗೆ ಕರೆ ಮಾಡುತ್ತಾರೆ. ಆಗ ಆತನ ನಿಜಬಣ್ಣ ಬಯಲಾಗುತ್ತದೆ. ಕಲೆ ಎಂಬುದು ಬದುಕಿನ ಅನುಕರಣೆಯೋ ಅಥವಾ ಬದುಕು ಸಿನಿಮಾದ ಅನುಕರಣೆಯೋ ಗೊತ್ತಿಲ್ಲ ಎಂದು ಹೇಳಿದ್ದಾರೆ. ಷುಗರ್ ಡ್ಯಾಡಿ ಯಾರು? ಪ್ರಶಾಂತ್ ಪ್ರಸ್ತಾಪಿಸಿರುವ ಈ ಷುಗರ್ ಡ್ಯಾಡಿ ಯಾರು ಎಂಬುದು ಕುತೂಹಲ ಮೂಡಿಸಿದೆ. ‘ಹಣ, ದುಬಾರಿ ವಸ್ತುಗಳು ಮತ್ತು ಅಮೂಲ್ಯ ಉಡುಗೊರೆಗಳನ್ನು ನೀಡಿ ಅದಕ್ಕೆ ಪ್ರತಿಯಾಗಿ ಯುವತಿಯರೊಂದಿಗೆ ಲೈಂಗಿಕ ಸಂಬಂಧ ಹೊಂದಿರುವ ಹಿರಿಯ ವಯಸ್ಸಿನ ವ್ಯಕ್ತಿಗೆ ಷುಗರ್ ಡ್ಯಾಡಿ ಎನ್ನುತ್ತಾರೆ’ ಎಂದು ಅವರೇ ಟ್ವೀಟ್‌ನಲ್ಲಿ ವಿವರಣೆಯನ್ನೂ ನೀಡಿದ್ದಾರೆ.