LATEST NEWS
ಲಾಂಡ್ರಿ ಅಂಗಡಿಯಲ್ಲಿ ಅಗ್ನಿ ಅನಾಹುತ : ಲಕ್ಷಾಂತರ ರೂಪಾಯಿ ನಷ್ಟ

ಲಾಂಡ್ರಿ ಅಂಗಡಿಯಲ್ಲಿ ಅಗ್ನಿ ಅನಾಹುತ : ಲಕ್ಷಾಂತರ ರೂಪಾಯಿ ನಷ್ಟ
ಮಂಗಳೂರು, ಅಕ್ಟೋಬರ್ 19 : ಮಂಗಳೂರಿನಲ್ಲಿ ಅಗ್ನಿ ದುರಂತ ಸಂಭವಿಸಿದೆ. ಆಕಸ್ಮಿಕವಾಗಿ ಬೆಂಕಿ ತಗುಲಿದ ಪರಿಣಾಮ ಲಾಂಡ್ರಿ ಯೊಂದು ಸಂಪೂರ್ಣ ಸುಟ್ಟು ಕರಕಲಾದ ಘಟನೆ ಮಂಗಳೂರಿನಲ್ಲಿ ನಡೆದಿದೆ. ಮಂಗಳೂರಿನ ಬಿಜೈ ಕೆ ಎಸ್ ಆರ್ ಟಿಸಿ ಮುಖ್ಯ ರಸ್ತೆಯಲ್ಲಿರುವ ರೋಹನ್ ಕಾರ್ಪೋರೇಷನ್ ಮಾಲಕತ್ವದ ಬಿಯಂಕ ವಸತಿ ಸಮುಚ್ಚಯದಲ್ಲಿರುವ ಮೈ ಹ್ಯಾಂಗರ್ಸ್ ಬಟ್ಟೆ ಲಾಂಡ್ರಿ ಅಂಗಡಿಯಲ್ಲಿ ಈ ದುರಂತ ಸಂಭವಿಸಿದೆ.
ಇಂದು ಬೆಳಗ್ಗೆ 8 ಗಂಟೆ ಸುಮಾರಿಗೆ ಈ ಅನಾಹುತ ಸಂಭವಿಸಿದೆ. ಕೂಡಲೇ ಸ್ಥಳಕ್ಕೆ ಧಾವಿಸಿ ಅಗ್ನಿ ಶಾಮಕ ದಳ ಬೆಂಕಿಯನ್ನು ನಂದಿಸಿದ್ದಾರೆ. ದುರ್ಘಟನೆಯಲ್ಲಿ ಲಕ್ಚಾಂತರ ರೂಪಾಯಿ ಬೆಲೆ ಬಾಳುವ ಬಟ್ಟೆ ಸ್ಚಚ್ಚ ಮಾಡುವ ಮಶಿನ್ ಗಳು, ಬಟ್ಟೆಬರೆ, ಇತರ ಸಾಮಾಗ್ರಿಗಳು ಸಂಪೂರ್ಣ ಬೆಂಕಿಗಾಹುತಿಯಾಗಿವೆ.

ಅತ್ತಾವರದ ರೆನ್ ವಿಕ್ ಎಂಬವರಿಗೆ ಸೇರಿದ ಅಂಗಡಿ ಇದಾಗಿದೆ ಎಂದು ತಿಳಿದು ಬಂದಿದ್ದು, ಕಳೆದ 5 ತಿಂಗಳ ಹಿಂದೆಯಷ್ಟೇ ಸುಮಾರು 25 ಲಕ್ಷ ರೂಪಾಯಿಗಳನ್ನು ವ್ಯಯಿಸಿದ್ದರು ಎಂದು ತಿಳಿದು ಬಂದಿದೆ ಘಟನಾ ಸ್ಥಳಕ್ಕೆ ಅಗ್ನಿ ಶಾಮಕ ದಳದ ಹಿರಿಯ ಅಧಿಕಾರಿಗಳು, ಪೋಲಿಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಬೆಂಕಿ ತಗುಲಿದ ಸಂದರ್ಭದಲ್ಲಿ ಬಿಯಾಂಕಾ ಅಪಾರ್ಟ್ಮೆಂಟ್ ಕಟ್ಟಡ ದಲ್ಲಿ ಅಳವಡಿಸಲಾಗಿದ್ದ ಅತ್ಯಾಧುನಿಕ ಹೇಳಲಾಗಿದ್ದ ಫೈರ್ ಫೈಟಿಂಗ್ ಸಿಸ್ಟಮ್ ಕಾರ್ಯಾಚರಿಸಲಿಲ್ಲ ಎಂದು ಆರೋಪಿಸಲಾಗಿದೆ .
ಲಾಂಡ್ರಿಯಲ್ಲಿ ಯಾರೂ ಇಲ್ಲದ ಕಾರಣ ಯಾವುದೇ ಸಾವು ನೋವು ಸಂಭವಿಸಿಲ್ಲ ಆದರೆ ಅಪಾರ್ಟ್ಮೆಂಟ್ ನಲ್ಲಿ ಈ ದುರಂತ ಸಂಭವಿಸಿದರೆ ಗತಿ ಏನು ಎಂಬ ಪ್ರಶ್ನೆ ಈಗ ಉದ್ಭವಿಸಿದೆ .